ಚನ್ನಪಟ್ಟಣ: ಚನ್ನಪಟ್ಟಣ ಹೊರವಲಯದ ಮಹದೇಶ್ವರ ದೇವಸ್ಥಾನದ ಬಳಿ ಹಲಗೂರು-ಸಾತನೂರು ಮುಖ್ಯರಸ್ತೆಯಲ್ಲಿ ವ್ಯಾನ್‌ವೊಂದು ಹೊತ್ತಿ ಉರಿದಿದೆ.
ಮೆಕಾನಿಕ್ ಚಾಂದ್ ಎಂಬುವರು ವ್ಯಾನ್‌ನಲ್ಲಿ ಹಲಗೂರು ಕಡೆ ಹೋಗಿದ್ದರು. ಅಲ್ಲಿಂದ ಚನ್ನಪಟ್ಟಣಕ್ಕೆ ವಾಪಸ್ ಬರುತ್ತಿದ್ದಾಗ ವ್ಯಾನ್‌ನ ಎಂಜಿನ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಅವರು ವ್ಯಾನ್ ನಿಲ್ಲಿಸಿ ಹೊರ ಬಂದಿದ್ದಾರೆ. ನಂತರ ಬೆಂಕಿ ವಾಹನ ಆವರಿಸಿ ವ್ಯಾನ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಘಟನೆ ನಡೆದಾಗ ವ್ಯಾನ್‌ನಲ್ಲಿ ಬೇರೆ ಯಾರೂ ಇರಲಿಲ್ಲ. ಮದ್ದೂರು ಗ್ರಾಹಕರೊಬ್ಬರು ಚಾಂದ್ ಗ್ಯಾರೇಜಿಗೆ ವ್ಯಾನ್ ದುರಸ್ತಿ ಮಾಡಿಸಲು ಬಿಟ್ಟಿದ್ದರು. ರಸ್ತೆಯಲ್ಲಿ ಹೊತ್ತಿ ಉರಿಯುತ್ತಿದ್ದ ವ್ಯಾನ್ ನೋಡಿದ ಸಾರ್ವಜನಿಕರು ಅಗ್ನಿಶಾಮಕ ದಳಕ್ಕೆ ದೂರವಾಣಿ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
10/01/2025 12:32 pm