ರಾಯಚೂರು : ಒಂದು ಕೋಟಿಗೂ ಅಧಿಕ ಮೊತ್ತದ ಚೆಕ್ ಡ್ಯಾಂ ಕಾಮಗಾರಿ ಮುಗಿಸಿ 20 ದಿನಗಳಲ್ಲಿಯೇ ಅಲ್ಪ ಪ್ರಮಾಣದ ಮಳೆ ಪ್ರವಾಹಕ್ಕೆ ಕೊಚ್ಚಿ ಹೋದ ಘಟನೆ ಸಿಂಧನೂರು ತಾಲೂಕಿನ ಕುನ್ನಟಿಗಿ ಗ್ರಾಮದಲ್ಲಿ ನಡೆದಿದೆ.
ಹೌದು ರಾಯಚೂರು ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಉತ್ತಮವಾಗಿ ಮಳೆ ಆಗುತ್ತಿದೆ. ಸಿಂಧನೂರು ತಾಲೂಕಿನಲ್ಲಿ ಹೇಳಿಕೊಳ್ಳುವಷ್ಟು ಮಳೆಯಾಗದಿದ್ದರೂ ಅಲ್ಪ ಪ್ರಮಾಣದ ಮಳೆಯಾಗಿ, ಹಳ್ಳಗಳು ತುಂಬಿ ಹರಿಯುತ್ತಿವೆ.
ಈ ಒಂದು ಅಲ್ಪ ಮಳೆಗೆ ಅಭಿವೃದ್ಧಿ ಕಾಮಗಾರಿಗಳ ಕರಾಳ ಮುಖ ಹೊರಬಿದ್ದಿದೆ. ಇನ್ನೂ ಈ ಒಂದು ಕಾಮಗಾರಿ ಸಂಪೂರ್ಣ ಕಳಪೆ ಮಟ್ಟಿದಿಂದ ಆಗಿದೆ ಎಂಬ ಬಗ್ಗೆ ಗ್ರಾಮಾಂತರ ಭಾಗದ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಈ ಒಂದು ಚೆಕ್ ಡ್ಯಾಮ್ ಕಾಮಗಾರಿ ಮುಗಿದು ಕೇವಲ 20 ದಿನಗಳು ಮಾತ್ರ ಕಳೆದಿವೆ. ಅಷ್ಟರಲ್ಲಾಗಲೇ ಈ ಒಂದು ಸಣ್ಣ ಪ್ರಮಾಣದ ಮಳೆಯ ಪ್ರವಾಹಕ್ಕೆ ಕೊಚ್ಚಿ ಹೋಗಿರುವುದು ಎಷ್ಟರಮಟ್ಟಿಗೆ ಸರಿ ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ.
ಇನ್ನು ಈ ಒಂದು ಚೆಕ್ ಡ್ಯಾಂ ನಿರ್ಮಾಣದಲ್ಲಿ ಒಂದೇ ಒಂದು ಕಬ್ಬಿಣದ ಅಂಶ ಬಳಸದೆ ಇರುವುದೇ, ಈ ಒಂದು ಚೆಕ್ ಡ್ಯಾಂ ಕೊಚ್ಚಿ ಹೋಗಲು ಕಾರಣ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
PublicNext
01/10/2022 09:54 am