ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು : ಶ್ರೀ ಶಕ್ತಿ ಗಣಪತಿ ನೂತನ ದೇವಸ್ಥಾನ ಉದ್ಘಾಟನೆ

ರಾಯಚೂರು : 600 ಕೆಜಿ ತೂಕದ ಶ್ರೀ ಶಕ್ತಿ ಗಣೇಶನ ನೂತನ ವಿಗ್ರಹವನ್ನು ಇಂದು ಪ್ರತಿಷ್ಠಾಪನೆ ಮಾಡಿ ದೇವಸ್ಥಾನ ಉದ್ಘಾಟನಯನ್ನು ಬೃಹನ್ಮಠದ ವಿವಿಧ ಸ್ವಾಮೀಜಿಗಳ ಸಾನಿತ್ಯದಲ್ಲಿ ಮಾಡಲಾಯಿತು.

ರಾಯಚೂರು ನಗರದ ಭಂಗಿಕುಂಟ ಭವಾನಿ ಚೌಕನಲ್ಲಿ ಈ ಒಂದು ನೂತನ ದೇವಸ್ಥಾನವನ್ನ ನಿರ್ಮಾಣ ಮಾಡಲಾಗಿತ್ತು. ಇಂದು ವೀರಶೈವ ಗೌಳಿ ಸಮಾಜದ ವತಿಯಿಂದ ನೂತನ ದೇವಸ್ಥಾನ ಉದ್ಘಾಟನೆ ನೆರವೇರಿಸಲಾಯಿತು. ಕಿಲ್ಲೆಬ್ರಹ್ಮಠದ ಶಾಂತಮಲ್ಲ ಶಿವಾಚಾರ್ಯರು, ಸೋಮವಾರಪೇಟೆ ಮಠದ ಶ್ರೀ ಅಭಿನವ ರಾಚೋಟಿ ವೀರಶಿವಾಚಾರ್ಯ ಸ್ವಾಮೀಜಿಗಳ ಸಾನಿಧ್ಯದಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾಪನೆ ಮಾಡಲಾಯಿತು. ಈ ವೇಳೆ ರಾಯಚೂರು ನಗರ ಶಾಸಕ ಡಾ. ಶಿವರಾಜ ಪಾಟೀಲ್ ಅವರು ಶ್ರೀ ಶಕ್ತಿ ಗಣಪನಿಗೆ ವಿಶೇಷ ಪೂಜೆ ಸಲ್ಲಿಸಿದರು.

Edited By : Manjunath H D
PublicNext

PublicNext

05/10/2022 12:01 pm

Cinque Terre

32.93 K

Cinque Terre

0