ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು : ಸೋಮವಾರಪೇಟೆ ಮಠದಲ್ಲಿ ಶರನ್ನವರಾತ್ರಿ ದೇವಿ ಪುರಾಣ ಪ್ರವಚನ

ರಾಯಚೂರು : ಶರನ್ನವರಾತ್ರಿ ಅಂಗವಾಗಿ ದೇವಿ ಪುರಾಣ ಪ್ರವಚನ ಕಾರ್ಯಕ್ರಮವನ್ನು ಶ್ರೀ ಷ.ಬ್ರ.ಶ್ರೀ ಅಭಿನವ ರಾಚೋಟಿ ವೀರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ.

ದೇವಿ ಘಠ ಸ್ಥಾಪನೆಗೆ ಪೂಜೆ ಸಲ್ಲಿಸಿ ಪುರಾಣ ಪಠಣ ಪ್ರಾರಂಭಿಸಿದ ಪುರಾಣ ಪ್ರವಚನಕಾರರಾದ ವೇ.ಮೂ. ಬೂದಯ್ಯ ಶಾಸ್ತ್ರಿ ಕನ್ನಳ್ಳಿಯವರು ದೇವಿ ಪುರಾಣವು ಇದು ಮಾನವನ ದೇಹದ ಪುರಾಣವಾಗಿರುತ್ತದೆ, ನಮ್ಮಲ್ಲಿರುವ ಅಸತ್ಯ, ಅಸುಹೇ, ಅಹಂಕರವನ್ನು ಶ್ರೀಮಾತೆಯ ಪಾದಗಳಿಗೆ ಸಮರ್ಪಿಸಿ ಸನ್ಮಾರ್ಗದಲ್ಲಿ ಜೀವನ ನೆಡೆಸುವುದೇ ದೇವಿಯ ಪುರಾಣವಾಗಿದೆ ಎಂದು ಹೇಳಿ ಶುದ್ಧ ಮಡಿ, ಶೃದ್ಧಾ ಭಕ್ತಿಯಿಂದ ಮಾತೆ ಶಾಂಭವಿಯನ್ನು ಸ್ಮರಿಸಿ ನಮ್ಮ ಜೀವನವನ್ನು ಪಾವನಗೊಳಿಸಿಕೊಳ್ಳಬೇಕಾಗಿದೆ ಎಂದು ಹೇಳುತ್ತ ಪುರಾಣವನ್ನು ಪ್ರಾರಂಭಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಮಠದ ಶ್ರೀಗಳು ಬಿಟ್ಟು ಬಿಡದೇ ಸುರಿಯುತ್ತಿರುವ ವರುಣನ ಆರ್ಭಟ ಮತ್ತು ಟಿವಿ ಮಾಧ್ಯಮಗಳ ಧಾರಾವಾಹಿಯ ಭರಾಟೆಯ ಸಂದರ್ಭದಲ್ಲಿ ಶ್ರೀಮಠದ ಸದ್ಭಕ್ತರು ನಿತ್ಯವೂ ಪುರಾಣ ವಾಚನಕ್ಕೆ ಆಗಮಿಸುತ್ತಿರುವುದು ನಮ್ಮ ಮನಸ್ಸಿಗೆ ತುಂಬಾ ಸಂತೋಷ ತಂದಿದೆ.

ಯಾಕೆಂದರೆ ಈಗಿನ ಕಾಲಘಟ್ಟದಲ್ಲಿ ಸರ್ವ ಭಕ್ತರಿದ್ದರೆ ಮಠ ಮಂದಿರಗಳು ಬೆಳೆಯುವುದು ಅವರೇ ಇಲ್ಲ ಅಂದರೆ ಯಾರ ಮುಂದೆ ಪುರಾಣ ಹೇಳುವುದು ಎಂದು ಅಭಿಪ್ರಾಯ ಪಟ್ಟರು. ನಂತರ ಶಾಂಭವಿಯ ಘಟಸ್ಥಾಪನೆಯಲ್ಲಿ ೧೦೮ ಶಾಂಭವಿಯ ನಾಮಾವಳಿಗಳೊಂದಿಗೆ ಪುಷ್ಪ ಪತ್ರಿಗಳನ್ನು ಸಮರ್ಪಿಸಿ ಮಹಾಮಂಗಳಾರುತಿಯನ್ನು ಬೆಳಗಲಾಯಿತು.

Edited By : Abhishek Kamoji
Kshetra Samachara

Kshetra Samachara

01/10/2022 04:19 pm

Cinque Terre

940

Cinque Terre

0