ಕಲಿಯುಗ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನಕ್ಕೆ ಇಂದು ಹೈದರಾಬಾದಿನ ಭಕ್ತರು ನವರತ್ನ ಕವಚವನ್ನು ಅರ್ಪಿಸಿ ಪೀಠಾಧಿಪತಿಗಳ ಆಶೀರ್ವಾದವನ್ನು ಪಡೆದರು.
ಹೌದು ರಾಯಚೂರು ಗಡಿಭಾಗದಲ್ಲಿ ಇರುವಂತಹ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನಕ್ಕೆ ಇಂದು ಹೈದರಾಬಾದ್ ಮೂಲದ ನಿವಾಸಿಗಳಾದ ಎ.ವೆಂಕಟ್ ರೆಡ್ಡಿ, ಲಕ್ಷ್ಮಿ ಮತ್ತು ಕುಟುಂಬದವರು ನವರತ್ನದಿಂದ ಸಿದ್ಧಪಡಿಸಲಾದ ರಾಯರ ಕವಚವನ್ನು ಅರ್ಪಿಸಿದರು. ಈ ವೇಳೆ ಮಠದ ಪೀಠಾಧಿಪತಿಗಳಾದ ಶ್ರೀ ಸುಭುದೇಂದ್ರ ತೀರ್ಥರ ಸಾನಿತ್ಯದಲ್ಲಿ ಈ ಒಂದು ನವರತ್ನ ಕವಚವನ್ನು ಪಡೆದು ರಾಯರ ಮೂಲ ಬೃಂದಾವನಕ್ಕೆ ಅಲಂಕಾರ ಮಾಡುವ ಮೂಲಕ ವಿಶೇಷ ಪೂಜೆಯನ್ನ ಸಲ್ಲಿಸಿದರು. ತದನಂತರ ರಾಯರ ಆಶೀರ್ವಾದ ಮತ್ತು ಪೀಠಾಧಿಪತಿಗಳು ಕುಟುಂಬದವರಿಗೆ ಆಶೀರ್ವಚನ ನೀಡಿದರು.
PublicNext
29/09/2022 07:59 pm