ಚಕ್ರವರ್ತಿ ಸುಲಿಬೇಲೆ ನೇತೃತ್ವದಲ್ಲಿ ಯುವಾ ಬ್ರಿಗೇಡ್ ರಾಯಚೂರು ವತಿಯಿಂದ ಉಘೇ ಕಲ್ಯಾಣ ಕರ್ನಾಟಕ ಸಮಾವೇಶವನ್ನು ಸೆಪ್ಟೆಂಬರ್ 24 ರಂದು ಹಮ್ಮಿಕೊಳ್ಳಲಾಗಿದೆ ಎಂದು ಯುವಾ ಬ್ರಿಗೇಡ್ ಉತ್ತರ ಕರ್ನಾಟಕದ ರಾಜ್ಯ ಸಂಚಾಲಕ ವರ್ದಮಾನ್ ತ್ಯಾಗಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ನಗರದ ಯಾದವ ಸಮಾಜದ ಮೈದಾನದಲ್ಲಿ ಸಂಜೆ 5.30ಕ್ಕೆ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಕಲ್ಯಾಣ ಕರ್ನಾಟಕದ ವಿಮೋಚನೆ 75 ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ ಯುವಾ ಬ್ರಿಗೇಡ್ ಈ ಭಾಗದಲ್ಲಿ ಅನೇಕ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ಯೋಚಿಸಿದೆ ಎಂದರು.
ಈ ಸಮಾವೇಶಕ್ಕೆ ಉಪನ್ಯಾಸಕರಾಗಿ ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಆಗಮಿಸಲಿದ್ದಾರೆ. ಕಾರ್ಯಕ್ರಮ ದಿವ್ಯ ಸಾನಿಧ್ಯವನ್ನು ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಲಕ್ಷ್ಮಣ, ಬಸವರಾಜ ಮಾನವಿ ಇದ್ದರು.
PublicNext
23/09/2022 05:39 pm