ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು: ಶಾಸಕ ಶಿವನಗೌಡ ನಾಯಕ್ ನಿವೃತ್ತಿ ಘೋಷಿಸಲು ಒತ್ತಾಯ

ರಾಯಚೂರು: ಕಳೆದ ಸಂಸದರ ಚುನಾವಣೆಯಲ್ಲಿ ರಾಜ ಅಮರೇಶ್ವರ ನಾಯಕ್ ಅವರನ್ನ ಗೆಲ್ಲಿಸಿದರೆ, ಮೋದಿಯವರ ಕಾಲಿಗೆ ಬಿದ್ದು ಏಮ್ಸ್ ಸಂಸ್ಥೆಯನ್ನು ರಾಯಚೂರು ಜಿಲ್ಲೆಗೆ ತರುವ ಒಂದು ವಾಗ್ದಾನವನ್ನ ದೇವದುರ್ಗ ಶಾಸಕ ಶಿವನಗೌಡ ನಾಯಕ್ ಅವರು ಮಾಡಿದರು. ಮಾತಿಗೆ ತಪ್ಪಿದ ಶಾಸಕರು ರಾಜಕೀಯ ನಿವೃತ್ತಿ ಘೋಷಿಸಬೇಕು ಎಂದು ಒತ್ತಾಯಿಸಿ ಹೋರಾಟಗಾರರು ಪಾದಯಾತ್ರೆ ಆರಂಬಿಸಿದ್ದೇವೆ ಎಂದು ಬಸವರಾಜ್ ಕಳಸ ಅವರು ತೀವ್ರ ಅಸಮಧಾನ ಹೊರಹಾಕಿದ್ದು ಹೀಗೆ.

ಮೂರುವರೆ ವರ್ಷಗಳ ಹಿಂದೆ, ಸಂಸದರ ಚುನಾವಣೆ ವೇಳೆ ಕೆ.ಶಿವನಗೌಡ ನಾಯಕರು, ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುತ್ತ, ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ ನಾಯಕ ಗೆಲುವು ಸಾಧಿಸಿದರೆ ಮೋದಿಯವರ ಕೈ ಕಾಲು ಹಿಡಿದು ಏಮ್ಸ್ ತರುತ್ತೇನೆ. ಇಲ್ಲದಿದ್ದರೆ ತಾವು ರಾಜಕೀಯ ಸನ್ಯಾಸ ಸ್ವೀಕರಿಸುವುದಾಗಿ ಸವಾಲುಗಳ ಸರದಾರ ಕೆ.ಶಿವನಗೌಡ ನಾಯಕ ಸವಾಲು ಹಾಕಿದ್ದರು. ಈ ವೇಳೆ ಮಾತನಾಡಿದ ಸಮಾಜ ಸೇವಕಿ ರೂಪಾ ಶ್ರೀನಿವಾಸ್ ಅವರು ಕೂಡ ಶಿವನಗೌಡ ನಾಯಕ್ ಅವರ ವಿರುದ್ಧ ವಾಗ್ದಾಳಿ ನಡೆದರು. ಶಿವನಗೌಡ ನಾಯಕ ಅವರನ್ನು ಟಾರ್ಗೆಟ್ ಮಾಡಿ ಪಾದಯಾತ್ರೆ ಮಾಡುವಷ್ಟು ದೊಡ್ಡ ವ್ಯಕ್ತಿಯಲ್ಲ. ಅಧಿಕಾರಕ್ಕಾಗಿ ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದು ಹೀಗೆ.

ಇನ್ನು ಏಮ್ಸ್ ಸಮಾಚಾರಕ್ಕೆ ನಡೆಯುತ್ತಿರುವ ಪಾದಯಾತ್ರೆಯು ಕಲ್ಮಲಾ, ಸಿರವಾರ, ಹಾಗೂ ಮಲ್ಲದೇವರ ಗುಡ್ಡದ ಮೂಲಕ ಅರಕೇರಾ ಶಾಸಕರ ಮನೆ ತಲುಪಲಿದ್ದು. ಅವರ ಮನೆಯ ಮುಂದೆ ಹೋರಾಟ ಮಾಡಲಾಗುವುದು. ಅಷ್ಟರಲ್ಲಾಗಲೇ ಶಿವನಗೌಡ ನಾಯಕ ಅವರು ತಮ್ಮ ಮಾತಿಗೆ ತಕ್ಕಂತೆ ರಾಜಕೀಯ ನಿವೃತ್ತಿ ಘೋಷಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ.

ನೀಲಕಂಠ ಸ್ವಾಮಿ, ಪಬ್ಲಿಕ್ ನೆಕ್ಸ್ಟ್ ರಾಯಚೂರು..

Edited By : Manjunath H D
PublicNext

PublicNext

13/10/2022 06:51 pm

Cinque Terre

37.72 K

Cinque Terre

0