ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು: ಮನೆಕಳ್ಳತನ ಆರೋಪಿ ಬಂಧನ, 80 ಗ್ರಾಂ ಚಿನ್ನ ವಶ

ರಾಯಚೂರು: ಜಿಲ್ಲೆಯ ಸಿಂಧನೂರು ನಗರದಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಬಂಧಿತನಿಂದ 80 ಗ್ರಾಂ ಚಿನ್ನ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮನೆ ಕಳ್ಳತನವಾಗುತ್ತಿರುವ ಬಗ್ಗೆ ದೂರು ನಮೂದಾಗುತ್ತಿದ್ದಂತೆ ತಂಡ ರಚನೆ ಮಾಡಿ ತನಿಖೆ ಆರಂಭಿಸಲಾಗಿತ್ತು. ಈ ವೇಳೆ ಅನುಮಾನಗೊಂಡು ಹನುಮೇಶ(22) ತನಿಖೆಗೆ ಒಳಪಡಿಸಿದಾಗ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ವೇಳೆ ಪ್ರಕರಣಗಳಿಗೆ ಸಂಬಂಧಿಸಿ 4ಲಕ್ಷ 32ಸಾವಿರ ಬೆಲೆ ಬಾಳುವ 80 ಗ್ರಾಂ ಬಂಗಾರದ ಆಭರಣಗಳುಗಳನ್ನು ಜಪ್ತಿ ಮಾಡಿಕೊಂಡ ಪೊಲೀಸರು. ಆರೋಪಿಗೆ ಸಂಬಂದಿಸಿದ 2 ಪ್ರಕರಣಗಳನ್ನು ಭೇದಿಸಿದ್ದಾರೆ.

Edited By : Nagaraj Tulugeri
PublicNext

PublicNext

13/10/2022 04:20 pm

Cinque Terre

10.95 K

Cinque Terre

0