ರಾಯಚೂರು: ಏಮ್ಸ್ (AIIMS) ಮಂಜೂರು ಮಾಡಿಸುವಲ್ಲಿ ವಿಫಲ, ವಚನ ಇಷ್ಟ ಬದ್ಧತೆ ಇಲ್ಲದ ಶಾಸಕ ಶ್ರೀ ಶಿವನಗೌಡ ನಾಯಕ ರಾಜಕೀಯ ಸನ್ಯಾಸ ಸ್ವೀಕರಿಸುವಂತೆ ಆಗ್ರಹಿಸಿ ರಾಯಚೂರಿನಿಂದ ಅರಕೇರಾ ಪಾದಯಾತ್ರೆ ಮತ್ತು ಪ್ರತಿಭಟನಾ ಧರಣಿ ಸತ್ಯಾಗ್ರಹ.
ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಡಾ.ಡಿ.ಎಂ. ನಂಜುಂಡಪ್ಪ ವರದಿಯಲ್ಲಿ ರಾಯಚೂರಿನಲ್ಲಿ ಐಐಟಿ ಸ್ಥಾಪಿಸಬೇಕೆಂಬ ಮಹತ್ವದ ಶಿಫಾರಸ್ಸು ಮಾಡಲಾಗಿತ್ತು. ಜಿಲ್ಲೆಯ ರಾಜಕೀಯ ಇಚ್ಛಾಶಕ್ತಿಯ ಕೊರತೆ ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಪ್ರಭಾವಿ ರಾಜಕೀಯ ಶಕ್ತಿಗಳ ಕುತಂತ್ರದಿಂದಾಗಿ ಐಐಟಿ ಧಾರವಾಡದ ಪಾಲಾಗಿರುವುದು ದುರಂತ.
ಕೇಂದ್ರ ಸರಕಾರ ಇತ್ತೀಚೆಗೆ ಕರ್ನಾಟಕ ರಾಜ್ಯಕ್ಕೆ AIIMS ಮಂಜೂರು ಮಾಡುವ ನಿರ್ಧಾರ ಪ್ರಕಟಿಸಿದೆ. ಹಾಗಾಗಿ ಈ ಹಿಂದೆ ಯಡಿಯೂರಪ್ಪ ರಾಯಚೂರಿಗೆ ಘೋಷಿಸುವ ಹೇಳಿಕೆ ನೀಡಿದ್ದರು. ಆದ್ರೆ ಬೊಮ್ಮಾಯಿ ಅವರು ಬಂದ ಮೇಲೆ ಮತ್ತೇ ಧಾರವಾಡಕ್ಕೆ ಕೊಂಡೋಯ್ಯುವ ನಿರ್ಧಾರ ಮಾಡಲಾಗಿದ್ದು.
ರಾಯಚೂರುಗೆ ಏಮ್ಸ ಕೋಡದಿದ್ದರೆ ಏಮ್ಸ್ ಹೋರಾಟ ನಿಲ್ಲದೆ. ಮುಂದಿನ ಬಾರಿ ರಾಯಚೂರಿಗೆ ಸಿಎಂ ಬರಬೇಕಾದ್ರು ಯೋಚಿಸಬೇಕಾಗಿದೆ. ಬರುವುದಾರೆ ಏಮ್ಸ್ ಆದೇಶ ಪತ್ರದ ಸಮೇತ ಬರಬೇಕು ಎಂದು ಎಚ್ಚರಿಕೆ ನೀಡಿದರು.
PublicNext
13/10/2022 12:55 pm