ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು : ಗಿಲ್ಲೆಸೂಗೂರು ಗ್ರಾಮದಲ್ಲಿ ರಾಜಕೀಯ ಪಕ್ಷಗಳ ಜಾತ್ರೆ

ರಾಯಚೂರು : ಚುನಾವಣೆ ವರ್ಷ ಆರಂಭವಾಗಿದೆ. ಚುನಾವಣೆಗೆ JCB ಪಕ್ಷಗಳು ಭರ್ಜರಿ ಸಿದ್ದತೆ ನಡೆಸಿವೆ. ರಾಜಕೀಯ ಚಟುವಟಿಕೆಗಳನ್ನು ತೀವ್ರಗೊಳಿಸಿವೆ. ರಾಯಚೂರು ಜಿಲ್ಲೆಯ ಗಿಲ್ಲೇಸೂಗೂರು ಗ್ರಾಮ ಇದೀಗ ಮೂರು ಪಕ್ಷಗಳ ಬೃಹತ್ ಸಮಾವೇಶ ಕೇಂದ್ರವಾಗಿರುವುದು ಗಮನಾರ್ಹವಾಗಿದೆ.

ಗಾಣದಾಳ ಶ್ರೀ ಪಂಚಮುಖಿ ಸನ್ನಿಧಾನ ಹಾಗೂ ನಡೆದಾಡುವ ದೇವರೆಂದೇ ಕರೆಯುವ ಶ್ರೀ ರಾಘವೇಂದ್ರ ಸ್ವಾಮಿಗಳ ತಪಸ್ಸು ಕೇಂದ್ರವಾದ ಗಿಲ್ಲೇಸೂಗೂರು ಹೋಬಳಿ ವ್ಯಾಪ್ತಿಯಲ್ಲಿ ರಾಜಕೀಯ ಗರಿಗೆದರಿದೆ. ಸೆಪ್ಟೆಂಬರ್‌ 30ರಂದು ಜೆಡಿಎಸ್ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಬೃಹತ್ ಸಮಾವೇಶವನ್ನು ಗಿಲ್ಲೇಸೂಗೂರಿನಲ್ಲಿ ನಡೆಸಲಾಯಿತು.

ಇಂದು ಬಿಜೆಪಿ ಪಕ್ಷದಿಂದ ಜನಸ್ಪಂದನ ಯಾತ್ರೆ ಆರಂಭಿಸಲಾಗುತ್ತಿದೆ. 21ರಂದು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಕೂಡ ಗಿಲ್ಲೆಸೂಗೂರಿನಿಂದ ಆರಂಭವಾಗುತ್ತಿರುವುದು, ಇಲ್ಲಿ ನಿಜಕ್ಕೂ ಗಮನಾರ್ಹ ವಿಚಾರವಾಗಿದ್ದು, ಸದ್ಯಕ್ಕೆ ರಾಯಚೂರು ಗ್ರಾಮಾಂತರ ಪ್ರದೇಶದಲ್ಲಿ ರಾಜಕೀಯ ಪಕ್ಷಗಳ ಜಾತ್ರೆಯೇ ನಡೆಯುತ್ತಿದೆ.

Edited By : Nirmala Aralikatti
Kshetra Samachara

Kshetra Samachara

11/10/2022 08:39 am

Cinque Terre

1.2 K

Cinque Terre

0