ರಾಯಚೂರು : ಮಂತ್ರಾಲಯದಿಂದ ಭಾರತ ಜೋಡೋ ಯಾತ್ರೆಯನ್ನು ರಾಯಚೂರು ಜಿಲ್ಲೆಯಲ್ಲಿ ರಾಹುಲ್ ಗಾಂಧಿಯವರು ಆರಂಭಿಸಲಿದ್ದು, ಯರಗೇರ ಗ್ರಾಮದಲ್ಲಿ ವಾಸ್ತವ್ಯ ಹೂಡಿ, ಎರಡನೇ ದಿನ ರಾಯಚೂರು ನಗರದ ಮೂಲಕ ತೆಲಂಗಾಣಕ್ಕೆ ತೆಳ್ಳಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿಯವರು ಎರಡು ದಿನಗಳ ಕಾಲ ರಾಯಚೂರು ಜಿಲ್ಲೆಯಲ್ಲಿ ಪಾದಯಾತ್ರೆ ಮಾಡಲಿದ್ದು, ಮೊದಲು ಮಂತ್ರಾಲಯದ ಮುಖಾಂತರ ಗಿಲ್ಲೆಸೂಗೂರು ಗ್ರಾಮಕ್ಕೆ ಆಗಮಿಸಿ, ಅಲ್ಲಿ ಭೋಜನ ಸವಿದು ನಂತರ ಕೆರೆಬುದೂರು ಗ್ರಾಮಕ್ಕೆ ಆಗಮಿಸಿ, ಅಲ್ಲಿ ರೈತರೊಂದಿಗೆ ಸಂವಾದ ನಡೆಸುತ್ತಾರೆ.
ತದನಂತರ ಯರಗೇರಾ ಗ್ರಾಮದವರೆಗೆ ಪಾದಯಾತ್ರೆ ಮಾಡಿ, ಯರಗೇರಾ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ, ಮಾರನೇ ದಿನ ಬೆಳಗ್ಗೆ ರಾಯಚೂರು ನಗರದ ಗಾಂಧಿ ವೃತ್ತ, ಮಹಾಬಳೇಶ್ವರ ವೃತ್ತ, ಗಂಜ್ ವೃತ್ತದ ಮುಖಾಂತರ ಶಕ್ತಿನಗರ ತೆರಳಿ ಅಲ್ಲಿಂದ ತೆಲಂಗಾಣ ರಾಜ್ಯ ಪ್ರವೇಶ ಮಾಡಲಿದ್ದಾರೆ ಎಂದು ಹೇಳಿದರು.
PublicNext
10/10/2022 05:11 pm