ರಾಯಚೂರು : 3570 ಕಿ.ಮೀ,12 ರಾಜ್ಯ,2 ಕೇಂದ್ರಾಡಳಿತ ಸೇರಿ ಒಟ್ಟು 14 ರಾಜ್ಯಗಳಲ್ಲಿ ಪಾದಯಾತ್ರೆ ನಡೆಯುತ್ತಿದೆ. ಈ ದೇಶದಲ್ಲಿ ಈ ಭಾರತ್ ಜೋಡೋ ಇದೇ ಮೊದಲ ಪಾದಯಾತ್ರೆ ಐತಿಹಾಸಿಕ ಪಾದಯಾತ್ರೆ ಆಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ರಾಯಚೂರು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಭಾರತ್ ಜೋಡೋ ಯಾತ್ರೆಯ ಪಾದಯಾತ್ರೆ ಐತಿಹಾಸಿಕ, ದೇಶದಲ್ಲಿ ಇದೇ ಮೊದಲ ಪಾದಯಾತ್ರೆ ಆಗಿದೆ.
ಒಟ್ಟು 3570 ಕಿ.ಮೀ,12 ರಾಜ್ಯ,2 ಕೇಂದ್ರಾಡಳಿತ ಸೇರಿ ಒಟ್ಟು 14 ರಾಜ್ಯಗಳಲ್ಲಿ ಪಾದಯಾತ್ರೆ ನಡೆಯುತ್ತಿದೆ. ಹಿಂದೆ ಚಂದ್ರಶೇಖರ್, ಅಡ್ವಾಣಿ, ಎಲ್ಲರೂ ಪಾದಯಾತ್ರೆ ಮಾಡಿದ್ದಾರೆ, ಈ ಪಾದಯಾತ್ರೆ ವಿಶೇಷತೆ ಏನು ಅಂದ್ರೆ, ನರೇಂದ್ರ ಮೋದಿ ಪ್ರಧಾನಿ ಬಳಿಕ ದ್ವೇಷದ ರಾಜಕಾರಣ ನಡೆಯುತ್ತಿದೆ, ಧರ್ಮದ ಆಧಾರದ ಮೇಲೆ ಸದ್ಯ ರಾಜಕಾರಣ ನಡೆಯುತ್ತಿದೆ. ಇದರಿಂದ ಜನರ ಮನಸ್ಸುಗಳು ಒಡೆದು ಹೋಗುತ್ತಿವೆ. ದೇಶದಲ್ಲಿ ಅನೇಕ ಸಮಸ್ಯೆಗಳಿವೆ,ಸಮಸ್ಯೆ ಗಳ ಬಗ್ಗೆ ಚರ್ಚೆ ಮಾಡುತ್ತಿಲ್ಲ.
ಸರಕಾರದಿಂದ ಜನರಿಗೆ ಕೊಟ್ಟ ಭರವಸೆ ಅಂತೂ ಹಿಡೆರಿಸಲು ಆಗಲಿಲ್ಲ. ತನ್ನ ಸಮಸ್ಯೆಗಳನ್ನ ಮುಚ್ಚಿ ಹಾಕಲು ಹಿಂದುತ್ವ ವನ್ನ ಮುನ್ನೆಲೆಗೆ ತಂದಿದೆ ರೈತರು,ಅಲ್ಪಸಂಖ್ಯಾತರು ಭಯದಿಂದ ಬದುಕುವ ಸ್ಥಿತಿ ನಿರ್ಮಾಣವಾಗಿದ ಈ ಎಲ್ಲಾ ವಿಚಾರವನ್ನ ಜನರಿಗೆ ತಿಳಿಸಲು ರಾಹುಲ್ ಗಾಂಧಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. 3570 ಕಿ.ಮೀ ಪಾದಯಾತ್ರೆ ಮಾಡುವುದು ಸಾಮಾನ್ಯ ವಿಷಯವಲ್ಲ. ನಮಗೆ ಬೆಂಗಳೂರಿನಿಂದ ಬಳ್ಳಾರಿ ಗೆ ಪಾದಯಾತ್ರೆ ಮಾಡೋದು ಕಸರತ್ತು ಆಗಿತ್ತು.
PublicNext
10/10/2022 04:27 pm