ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರಿನ ಮಣ್ಣಿನ ಸಾಹಿತ್ಯದಲ್ಲಿ ಗಟ್ಟಿತನವಿದೆ: ಜಯಣ್ಣ

ರಾಯಚೂರು: ಎರಡು ನದಿಗಳ ನಡುವೆ ಇರುವ ರಾಯಚೂರಿಗೆ ಶ್ರೀಮಂತವಾದ ಸಾಂಸ್ಕೃತಿಕ ಚರಿತ್ರೆ ಇದೆ. ಈ ಮಣ್ಣಿನ ಸಾಹಿತ್ಯದಲ್ಲಿ ಗಟ್ಟಿತನವಿದೆ. ಕವಿಗಳು ತಮ್ಮ ಕವಿತೆಗಳನ್ನು ಉತ್ತಮವಾಗಿ ವಾಚಿಸಬೇಕು ಎಂದು ನಗರಸಭೆ ಹಿರಿಯ ಸದಸ್ಯ ಜಯಣ್ಣ ಹೇಳಿದರು.

ನಗರದ ಕೇಂದ್ರ ಬಸ್ ನಿಲ್ದಾಣ ಹತ್ತಿರದ ಮೆಕ್ಕಾ ದರವಾಜದಲ್ಲಿ ನಗರಸಭೆ ಹಾಗೂ ಐತಿಹಾಸಿಕ ಕೋಟೆ ಅಧ್ಯಯನ ಸಮಿತಿಯಿಂದ ನಾಡ ಹಬ್ಬ-2022 ನಿಮಿತ್ತ ಮಂಗಳವಾರ ಏರ್ಪಡಿಸಿದ್ದ ದಸರಾ ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಈ ಮಣ್ಣಿನ ಸಾಹಿತ್ಯದಲ್ಲಿ ಗಟ್ಟಿತನವಿದೆ. ಕವಿಗಳು ತಮ್ಮ ಕವಿತೆಗಳನ್ನು ಉತ್ತಮವಾಗಿ ವಾಚಿಸಬೇಕು. ನಗರಸಭೆಯ ನೂತನ ಅಧ್ಯಕ್ಷರು ಎಲ್ಲ ಪೌರಕಾರ್ಮಿಕರಿಗೆ ಹೊಸ ಬಟ್ಟೆಗಳನ್ನು ಕೊಡುವುದರ ಮೂಲಕ ಈ ವರ್ಷ ವಿಶೇಷವಾಗಿ ನಾಡಹಬ್ಬ ಆಚರಿಸುತ್ತಿದ್ದಾರೆ. ಹಬ್ಬದ ನಿಮಿತ್ತ ಪೌರಕಾರ್ಮಿಕರಿಗೆಲ್ಲರಿಗೂ ಕ್ರೀಡೆಗಳನ್ನು ಆಯೋಜಿಸಿರುವುದು ಕೂಡಾ ವಿಶೇಷ ಎಂದರು.

ರಾಯಚೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವೆಂಕಟೇಶ್ ಬೇವಿನಬೆಂಚಿ ಮಾತನಾಡಿ, ಕವಿ ಎಂದರೆ ಸಂಸ್ಕೃತಿಯ ರಕ್ಷಕ ಮತ್ತು ಸಮಾಜ ರಕ್ಷಕ. ಹಾಗಾಗಿ ಈ ದೇಶದಲ್ಲಿ ಕವಿಗಳಿಗೆ ಮಹತ್ವದ ಸ್ಥಾನವಿದೆ. ಯಾವ ದೇಶದಲ್ಲಿ ಬುದ್ಧಿವಂತರು, ಸೃಜನಶೀಲರು, ಲೇಖಕರು ಸಾಹಿತಿಗಳಿದ್ದಾರೆ. ಆ ದೇಶ ಹೆಚ್ಚು ಸಾಂಸ್ಕೃತಿಕವಾಗಿ ಬೆಳೆಯುತ್ತದೆ. ಯಾವ ದೇಶದಲ್ಲಿ ಕವಿ ಮತ್ತು ಸಾಹಿತಿಗಳಿಗೆ ಬೆಲೆ ಇರುವುದಿಲ್ಲ ಆ ದೇಶ ಅವನತಿಗೆ ಹೊಂದುತ್ತದೆ. ಹಾಗಾಗಿ ಇಂದು ಕವಿಗಳು ಪ್ರೀತಿ ಮತ್ತು ಸ್ನೇಹವನ್ನು ಹಂಚುವ ಕಾರ್ಯ ಮಾಡಬೇಕು. ಹಾಗಿದ್ದಾಗ ಸಮಾಜದಲ್ಲಿ ಪ್ರೀತಿ ಮತ್ತು ವಿಶ್ವಾಸವನ್ನು ಬಿತ್ತಬಹುದು ಎಂದು ಹೇಳಿದರು.

Edited By : Nagesh Gaonkar
PublicNext

PublicNext

06/10/2022 08:56 am

Cinque Terre

29.24 K

Cinque Terre

0