ರಾಯಚೂರು: ಐಕ್ಯಾತಾ ಯಾತ್ರೆ ಸರ್ಕಾರದ ದುರಾಡಳಿತ ವಿರುದ್ಧ ಹೋರಾಟವಾಗಿದೆ. ಕೊಟ್ಟ ಮಾತನ್ನು ಈಡೇರಿಸದೆ ಜನರಿಗೆ ದಾರಿ ತಪ್ಪಿಸಿದೆ ಬಿಜೆಪಿ ಸರಕಾರ ಎಂದು ಮಾಜಿ ಸಚಿವ ಈಶ್ವರ ಖಂಡ್ರೆ ಅವರು ಬಿಜೆಪಿ ಸರಕಾರದ ವಿರುದ್ದ ಅಸಮಧಾನ ವ್ಯಕ್ತಪಡಿಸಿದರು.
ರಾಯಚೂರು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಬಿಜೆಪಿ ಸರಕಾರದ ವೈಫಲ್ಯದ ಬಗ್ಗೆ ಅಸಮಧಾನ ವ್ಯಕ್ತಪಡಿಸುತ್ತಾ, ಪ್ರಸ್ತುತ ಬೆಲೆ ಏರಿಕೆ ಅಲ್ಲಾ ಬಡವರು, ಮಧ್ಯಮ ವರ್ಗದವರು ದೇಶದಲ್ಲಿ ತತ್ತರಿಸಿಹೋಗುದ್ದಾರೆ. ದೇಶದ ಆರ್ಥಿಕತೆ ತಳಪಾತಕ್ಕೆ ಹೋಗಿದೆ. ಗ್ಯಾಸ್, ಪೆಟ್ರೋಲ್ ಆಹಾರ ಪದಾರ್ಥ ಸೇರಿ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆರಿ ಜನರ ಜೀವನವೇ ದುರ್ಬಲಗೊಳಿಸಿದೆ.
ದೇಶದಲ್ಲಿ ಯುವಕರಿಗೆ ಉದ್ಯೋಗವಿಲ್ಲದೇ ಪರದಾಡುತ್ತಿದ್ದಾರೆ. ಬಿಜೆಪಿ ಆಡಳಿತದಲ್ಲಿ ಅನೇಕ ರೀತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ದೇಶದಲ್ಲಿ ಭಯದ ವಾತಾವರಣ ಜಾತಿ ಜಾತಿಗಳಲ್ಲಿ, ಧರ್ಮ ಧರ್ಮದಲ್ಲಿ, ಹೊಡೆದಾಡುವ ನೀತಿ ಅನುಸರಿಸಿ ದೇಶದ ಸಾಮರಸ್ಯ ಹಾಳು ಮಾಡುತ್ತಿದೆ. ರಾಜ್ಯದ ಎಲ್ಲಾ ಕಡೆ ಕೋಮುವಾದದಿಂದಲೆ ಕೋಡಿದೆ. ಇಂತಹ ಪರಿಸ್ಥಿತಿಯಲ್ಲಿ ಅಖಂಡತೆ ಪ್ರಜಾಪ್ರಭುತ್ವ ಉಳಿಯಬೇಕು ದೇಶ ಅಭಿವೃದ್ಧಿ ಪಥದತ್ತ ತರಬೇಕು ಎಂಬ ನಿಟ್ಟಿನಲ್ಲಿ ಈ ಭಾರತ ಜೋಡೊ ಯಾತ್ರೆ ಮಾಡಲಾಗುತ್ತಿದೆ.
ಇನ್ನೂ ಈ ಐಕ್ಯತಾ ಯಾತ್ರೆ ರಾಯಚೂರು ಜಿಲ್ಲೆಯಲ್ಲಿ ಕೊಡ ಎರಡು ದಿನಗಳ ಕಾಲ ರಾಹುಲ್ ಗಾಂಧಿಯವರು ಪಾದಯಾತ್ರೆ ಮಾಡುತ್ತಿದ್ದು, 51 km ನಷ್ಟು ಕ್ರಮಿಸಲಿದ್ದಾರೆ. ಇಲ್ಲಿ ರಾಹುಲ್ ಗಾಂಧಿಯವರು ರೈತರೊಂದಿಗೆ ಸಂವಾದ ಮತ್ತು ಸಮಾವೇಶವನ್ನು ಕೂಡ ಯೋಜನೆ ಮಾಡಲಾಗಿದೆ ಎಂದು ಹೇಳಿದರು ಈಶ್ವರ ಖಂಡ್ರೆ ಹೇಳಿದರು.
PublicNext
26/09/2022 06:39 pm