ರಾಯಚೂರು: ಜಿಲ್ಲಾ ಉಪ್ಪಾರ ಸಮಾಜ ಜಿಲ್ಲಾ ಘಟಕದ ಪದಾಧಿಕಾರಿಗಳ ಮೂರು ವರ್ಷದ ಅವಧಿ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಚುನಾವಣೆ ನಡೆಸಬೇಕಿರೋದ್ರಿಂದ ಸಮಾಜದ ಜನರು ಡಿಸೆಂಬರ್ 30 ರೊಳಗೆ ಸದಸ್ಯ ನೋಂದಣಿ ಮಾಡಿಕೊಳ್ಳುವಂತೆ ಸಮಾಜ ಚುನಾವಣಾಧಿಕಾರಿ ಅಮರೇಶ ಅದೋನಿ ಹೇಳಿದರು.
ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಸೆ.20 ರಂದು ಮಹಾಸಭೆ ನಡೆಸಿ ಚುನಾವಣೆ ನಡೆಸಲು ಸದಸ್ಯತ್ವ ನೋಂದಣಿ, ಮತದಾರರ ಪಟ್ಟಿ ಸಿದ್ಧಪಡಿಸಲು ಮೂರು ಜನರನ್ನು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲು ನೇಮಿಸಿದ್ದಾರೆ. ಅಮರೇಶ ಅದೋನಿ, ಎಸ್.ಶ್ರೀನಿವಾಸ್, ಎಂ ಸುಭಾಶ್ ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಸಮಾಜದ ಬಾಂಧವರು ಅರ್ಜಿಯೊಂದಿಗೆ ನೂರು ರೂಪಾಯಿ ಶುಲ್ಕ, ಆಧಾರ್ ಕಾರ್ಡ್ ಜೆರಾಕ್ಸ್ ನೀಡುವ ಮುಖಾಂತರ ಸದಸ್ಯ ಪಡೆದುಕೊಳ್ಳಲು ಕರೆ ನೀಡಿದರು.
PublicNext
22/09/2022 06:32 pm