ರಾಯಚೂರು : ರಾಷ್ಟ್ರ ಮತ್ತು ರಾಜ್ಯದಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರವನ್ನು ತೋಲಗಿಸಲು ಯುವಶಕ್ತಿ ಆಮ್ ಆದ್ಮಿ ಪಕ್ಷಕ್ಕೆ ಕೈ ಜೋಡಿಸಿದಾಗ ಮಾತ್ರ ಸಾಧ್ಯ ಎಂದು ಪಕ್ಷದ ಗ್ರಾಮೀಣ ಮತ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಸುಭಾಷಚಂದ್ರ ಸಂಬಾಜಿ ಅವರು ಕರೆ ನೀಡಿದರು.
ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹೀರಾಪೂರು ಗ್ರಾಮದಲ್ಲಿ ಪಕ್ಷದ ಗ್ರಾಮ ಸಂಪರ್ಕ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ನಮ್ಮ ರಾಜ್ಯದಲ್ಲಿ ಲಂಚ ಭ್ರಷ್ಟಾಚಾರ ರಾಜಾರೋಷವಾಗಿ ನಡೆದಿದೆ ಯಾವುದೇ ಪಕ್ಷದವರು ಅಧಿಕಾರಕ್ಕೆ ಬಂದರೆ ಹಿಂದಿನ ಸರ್ಕಾರ ತೆಗೆದುಕೊಂಡ ಕಮೀಷನ್ ಗಿಂತ ದುಪ್ಪಟ್ಟು ಪಡೆಯುತ್ತಾರೆ. ದೇಶದಲ್ಲಿ ಎರಡು ರಾಜ್ಯಗಳಾದ ದೆಹಲಿ,ಪಂಜಾಬ್ ಗಳಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರ ಹಿಡಿದಿದೆ ಅಲ್ಲಿನ ಜನರಿಗೆ ಉಚಿತ ನೀರು ಮತ್ತು ವಿದ್ಯುತ್ ಮತ್ತು ಉಚಿತ ಮತ್ತು ಉತ್ತಮ ಶಿಕ್ಷಣ ಆರೋಗ್ಯ ಇನ್ನಿತರ ಹತ್ತು ಹಲವು ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗಿದೆ. ಅಲ್ಲಿ ಲಂಚಗುಳಿತನ ಒಡಿಸಲಾಗಿದೆ ಅದೇ ರೀತಿ ನಮ್ಮ ರಾಜ್ಯದಲ್ಲಿ ಎಎಪಿ ಸರ್ಕಾರ ರಚಿಸಿಕೊಂಡು ಎಲ್ಲವನ್ನೂ ಉಚಿತವಾಗಿ ಪಡೆದು ನೆಮ್ಮದಿಯಾಗಿ ಜೀವಿಸೋಣ ಎಂದು ಡಾ.ಸುಭಾಷಚಂದ್ರ ಸಂಬಾಜಿ ಕರೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಕೆ.ಬಸವರಾಜ ಗುತ್ತಿಗೆದಾರ ಮತ್ತು ಗ್ರಾಮೀಣ ಸಂಘಟನಾ ಕಾರ್ಯದರ್ಶಿ ಆರ್.ವೀರೇಶ್ ಸೂಗಪ್ಪ ವಗ್ಗರ್ ಮತ್ತು ಇನ್ನಿತರರು ಉಪಸ್ಥಿತರಿದ್ದರು.
Kshetra Samachara
20/09/2022 06:51 pm