ರಾಯಚೂರು : ಬೇರೆ ಪಕ್ಷಗಳಿಂದ ಕದಿಯೋ ರುಚಿ ಹಿಡಿದಿದೆ ಬಿಜೆಪಿ ಎಂದ ರಾಯಚೂರು ನಗರದಲ್ಲಿ ಮಾಜಿ ಸಿಎಂ ವೀರಪ್ಪ ಮೊಯ್ಲಿ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ರಾಯಚೂರು ನಗರದ ಕಾಂಗ್ರೇಸ್ ಕಛೇರಿಯಲ್ಲಿ ಮಾಧ್ಯದೊಂದಿಗೆ ಮಾತನಾಡಿದ ಅವರು ಬಿಹಾರದಲ್ಲಿ ನಿತಿಶ್ ಕುಮಾರ್, ಬಿಜೆಪಿ ಸಹವಾಸ ಬಿಟ್ಟಿದ್ದಾರೆ. 50 ಸೀಟ್ ಗೆ ಇಳಿಸುತ್ತೇವೆ ಅಂತ ನಿತೀಶ್ ಕುಮಾರ್ ಹೇಳಿದ್ದಾರೆ. ಬೇರೆ ಪಕ್ಷಗಳಿಂದ ಕದಿಯೋ ರುಚಿ ಹಿಡಿದಿದೆ ಬಿಜೆಪಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಇನ್ನೂ ಬಿಜೆಪಿಗೆ ಇತಿಹಾಸನೂ ಇಲ್ಲ ನಾಯಕತ್ವ ಇಲ್ಲ. ಸರ್ದಾರ್ ವಲ್ಲಭಭಾಯಿ ಪಟೇಲ್ ಬಗ್ಗೆ ಕ್ಲೇಮ್ ಮಾಡಿದ್ರು.
ಕಲ್ಯಾಣ ಕರ್ನಾಟಕ ನಮ್ಮಿಂದಾಯ್ತು ಅಂತ ಮಾತನಾಡ್ತಿದ್ದಾರೆ. ಬಿಜೆಪಿಗೆ ಪರಂಪರೆಯೂ ಇಲ್ಲ, ಜಾತಿಯತೆ, ಮತಿಯತೇ ಅಷ್ಟೇ ಬಿಜೆಪಿಗೆ ಇರೋದು. ಅದಕ್ಕೆ ಬೇರೆ ಬೇರೆ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನ ಬಳಸುತ್ತಿದೆ ಎಂದು ಅಸಮಾಧಾನ ಹೊರಹಾಕಿದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ಹಾಳಾಗಿ ಹೋಗಿದ್ದು ಜನರಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಭ್ರಷ್ಟಾಚಾರವನ್ನು ಕಟ್ಟಿ ಹಾಕಬೇಕಾದ ಲೋಕಾಯುಕ್ತ ಸರಿಯಿಲ್ಲ,
ಲೋಕಪಾಲ್ ಕೂಡ ಸರಿಯಿಲ್ಲ ಎಂದರು. ಬಿಜೆಪಿ ಅಧಿಕಾರ ಸರಿಯಾದರೇ ಲೋಕಾಯುಕ್ತವೂ ಸರಿಯಾಗತ್ತೆ. ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಣಗಳು ಇಲ್ಲ. ಸಾಮೂಹಿಕ ನಾಯಕತ್ವದಲ್ಲೇ ಎಲ್ಲವೂ ನಡೆಯುತ್ತದೆ, ಎಲ್ಲವೂ ತೀರ್ಮಾನವಾಗುತ್ತದೆ ಎಂದರು.
PublicNext
18/09/2022 05:21 pm