ರಾಯಚೂರು: ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಡಿಕೆಶಿ ಅವರಿಗೆ ಅಧಿಕಾರವಿದೆ. ಕೆಲಸ ಮಾಡದವರಿಗೆ ಟಿಕೆಟ್ ಕೊಡಲ್ಲ ಅಂದಿದ್ದಾರೆ, ಅದರಲ್ಲಿ ತಪ್ಪೇನಿಲ್ಲ ಎಂದು ರಾಯಚೂರಿನಲ್ಲಿ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.
ರಾಯಚೂರು ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಟಿಕೆಟ್ ವಿಚಾರದಲ್ಲಿ ರಾಜ್ಯಾಧ್ಯಕ್ಷರು ಮತ್ತು ಸಿಎಲ್ ಪಿ ನಾಯಕರಿದ್ದಾರೆ. ಎಲ್ಲರೂ ಯಾರಿಗೆ ಟಿಕೆಟ್ ಕೊಡಬೇಕು ಎಂಬ ಬಗ್ಗೆ ನಿರ್ಧಾರ ಮಾಡುತ್ತಾರೆ. ಇದೆಲ್ಲದರ ಜೊತೆಗೆ ಎಲೆಕ್ಷನ್ ಕಮಿಟಿ ಟಿಕೆಟ್ ನೀಡುವ ನಿರ್ಧಾರ ಮಾಡುತ್ತದೆ. ಇಲ್ಲಿ ಒಬ್ಬರ ನಿರ್ಧಾರ ಅಂತಿಮವಲ್ಲ.
ಇದು ಡಿಕೆಶಿ, ಸಿದ್ದರಾಮಯ್ಯ ನಡುವೆ ಅಸಮಾಧಾನವಿದೆ ಅಂತ ಅಲ್ಲಾ. ಎಲ್ಲರೂ ಒಟ್ಟಿಗೆ ಕೂತು ನಿರ್ಧಾರ ಮಾಡುತ್ತಾರೆ. ಆ ಸಂದರ್ಭ ಅಧ್ಯಕ್ಷರಾಗಿ ಮಾತನಾಡಿದ್ದಾರೆ ಅಷ್ಟೇ. ಸಿದ್ದರಾಮಯ್ಯ ಮಾತನಾಡುವ ರೀತಿ ಬೇರೆ, ಡಿಕೆಶಿ ಮಾತನಾಡುವ ರೀತಿ ಬೇರೆ. ಡಿಕೆಶಿ ಜೋರಾಗಿ ಮಾತನಾಡುತ್ತಾರೆ. ಅದು ಅವರ ಶೈಲಿ ಅಷ್ಟೇ, ಅದನ್ನು ಯಾಕೆ ದೊಡ್ಡದು ಮಾಡಬೇಕು.
ಸಿದ್ದರಾಮೋತ್ಸವ ಕಾರ್ಯಕ್ರಮ ಯಶಸ್ವಿಯಾಯ್ತು. ಆದ್ರೆ, ಲಕ್ಷಾಂತರ ಜನ ಊಹೆಗೂ ಮೀರಿ ಬಂದ ಕಾರಣ ಟ್ರಾಫಿಕ್ ನಿರ್ವಹಣೆ ಆಗಲಿಲ್ಲ ಅನ್ನೋ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ರಾಯರೆಡ್ಡಿ, ಅಷ್ಟು ಜನ ಸೇರಿದ್ದಕ್ಕೆ ನಾವು ಏನು ಮಾಡಲು ಆಗುತ್ತದೆ? ಹೆಚ್ಚು ಜನ ಬಂದಿದ್ದಕ್ಕೆ ಪೊಲೀಸರಿಗೂ ಏನೂ ಮಾಡಲು ಆಗಲಿಲ್ಲ. ಅದಕ್ಕೆ ಡಿಕೆಶಿ, ಟ್ರಾಫಿಕ್ ಮ್ಯಾನೇಜ್ ಮಾಡುವಲ್ಲಿ ಸೋತಿದ್ದೇವೆ ಎಂದಿದ್ದಾರೆ. ಅದು ಕಾರ್ಯಕ್ರಮದ ಸೋಲಲ್ಲ ಎಂದರು.
PublicNext
18/09/2022 05:11 pm