ರಾಯಚೂರು : ರಾಯಚೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮೂರು ಬೃಹತ್ ಸೇತುವೆ ನಿರ್ಮಾಣ ಮಾಡಲು ಸರ್ಕಾರದಿಂದ ಅನುದಾನ ಬಂದರೂ ಕೂಡ ಶಾಸಕರು, ಜಿಲ್ಲಾಡಳಿತ ಮತ್ತು ಗುತ್ತಿಗೆದಾರರ ನಿರ್ಲಕ್ಷದಿಂದ ಇದುವರೆಗೂ ಕಾಮಗಾರಿಗಳು ಪೂರ್ಣಗೊಳ್ಳದೆ ಇದೀಗ ಅವುಗಳಿಗೆ ಮೀಸಲಿರಿಸಿದ್ದ ಅನುದಾನ 13 ಪಟ್ಟು ಹೆಚ್ಚಾಗಿದೆ ಎನ್ನುತ್ತಾರೆ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್.
ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ರಾಯಚೂರು ಗ್ರಾಮಾಂತರ ಪ್ರದೇಶಕ್ಕೆ ಬರುವ ನಾರದ ಗಡ್ಡೆ ಸೇತುವೆ, ದೇವಸುಗೂರು ಬಳಿ ಇರುವ ಕೃಷ್ಣಾ ನದಿ ಸೇತುವೆ ಸೇರಿ ಒಟ್ಟು ಮೂರು ಕಾಮಗಾರಿಗಳಿಗೆ ಅನುದಾನವನ್ನ ಬಿಡುಗಡೆ ಮಾಡಲಾಗಿತ್ತು. ಆದರೆ ನಾರದ ಗಡ್ಡೆ ಸೇತುವೆ ಅನುದಾನ ಹಾಗೆಯೇ ಉಳಿದಿದ್ದು ಕಾಮಗಾರಿ ಪ್ರಸ್ತಾವನೆಯೇ ಮಾಡುತ್ತಿಲ್ಲ ಜಿಲ್ಲಾಡಳಿತ.
ಇನ್ನೂ ದೇವಸುಗೂರು ಕೃಷ್ಣ ಸೇತುವೆಗೆ ನಿರ್ಮಾಣ ಮಾಡಲಾಗುತ್ತಿರುವ ಸೇತುವೆ ತೀರಾ ಮಂದಗತಿಯಲ್ಲಿ ಕಾಮಗಾರಿ ನಡೆದಿದೆ. ದಶಕಗಳು ಕಳೆಯುತ್ತಾ ಬಂದರೂ ಕಾಮಗಾರಿಯ ಮುಗಿಯಿದೆ ಇರುವ ಬಗ್ಗೆ ಮಾಜಿ ಶಾಸಕ ತಿಪ್ಪರಾಜ ಅವರಿಗೆ ಕೇಳಿದರೆ ಸರ್ಕಾರದಿಂದ ಏನು ಅನುದಾನ ಬಿಡುಗಡೆ ಮಾಡಲಾಗಿದೆ ಆದರೆ ತಾಂತ್ರಿಕ ದೋಷಗಳು ಎದುರಾಗುತ್ತಿವೆ ಎಂದು ಹೇಳುತ್ತಿದ್ದಾರೆ.
ಇನ್ನು ಗ್ರಾಮಾಂತರ ಭಾಗದಲ್ಲಿ ಸರ್ಕಾರ ಅನುದಾನ ನೀಡಿದರು ಗುತ್ತಿಗೆದಾರರು, ಅಧಿಕಾರಿಗಳು ಕಾಮಗಾರಿಗೆ ಮುಂದಾಗುತ್ತಿಲ್ಲ ಎಂದು ದೇವರು ವರ ಕೊಟ್ರು ಪೂಜಾರಿ ವರ ಕೊಟ್ಟಿಲ್ಲ ಎಂದು ವ್ಯಂಗ್ಯ ಮಾಡುತ್ತಿದ್ದಾರೆ.
PublicNext
10/10/2022 01:18 pm