ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು: ಏಮ್ಸ್ ಸ್ಥಾಪನೆ ಜಿಲ್ಲಾ ಶಾಸಕರಿಗೆ ಇಚ್ಚಾಶಕ್ತಿ ಕೊರತೆ, ಸದನದಲ್ಲಿಲ್ಲ ಒಗ್ಗಟ್ಟಿನ ದ್ವನಿ

ರಾಯಚೂರು: ಒಂದು ಕಡೆ 136 ದಿನಗಳಿಂದ ಏಮ್ಸ್ ಸ್ಥಾಪನೆಗೆ ಒತ್ತಾಯಿಸಿ ಅನಿರ್ದಿಷ್ಟ ಅವಧಿ ಧರಣಿ ನಡೆಸಲಾಗುತ್ತಿದೆ. ಇದರ ಬಗ್ಗೆ ಸದನದಲ್ಲಿ ಧ್ವನಿ ಎತ್ತಲು ಒಂದು ಅವಕಾಶ ಸಿಕ್ಕರೂ ಕೂಡ ರಾಜ್ಯದ ವಿಧಾನ ಮಂಡಲ ಅಧಿವೇಶನದಲ್ಲಿ ಜಿಲ್ಲೆಯ ಶಾಸಕರು ಒಗ್ಗಟ್ಟಿನಿಂದ ಸರ್ಕಾರದ ಮೇಲೆ ಒತ್ತಡ ಹಾಕುತ್ತಿಲ್ಲ. ಈ ನಡೆ ಖಂಡಿಸಿ ಜಿಲ್ಲೆಯ ಜನರು ಅಸಮಾಧಾನ ಹೊರಹಾಕುತ್ತಿದ್ದಾರೆ.‌

ಏಮ್ಸ್ ಬೇಡಿಕೆ ಹೋರಾಟವು ಜಿಲ್ಲೆಯಾದ್ಯಂತ ವ್ಯಾಪಿಸಿದ್ದು, ಮಠಾಧೀಶರು ಸೇರಿದಂತೆ ನೂರಾರು ಸಂಘ, ಸಂಸ್ಥೆಗಳು ಈ ಹೋರಾಟ ಬೆಂಬಲಿಸುತ್ತಿದ್ದಾರೆ. ಬೇಡಿಕೆ ಈಡೇರಿಸುವಂತೆ ನಡೆಸುತ್ತಿರುವ ಹೋರಾಟದ ತೀವ್ರತೆ ಮತ್ತು ಒತ್ತಡವನ್ನು ಸರ್ಕಾರಕ್ಕೆ ಸರಿಯಾದ ರೀತಿಯಲ್ಲಿ ಜನಪ್ರತಿನಿಧಿಗಳು ತಲುಪಿಸುತ್ತಿಲ್ಲ ಎನ್ನುವ ಅಸಮಾಧಾನವನ್ನು ಹೋರಾಟಗಾರರು ಮತ್ತು ಸಾರ್ವಜನಿಕರು ಹೊರಹಾಕುತ್ತಿದ್ದಾರೆ.

'ಜಿಲ್ಲೆಯ ಅಭಿವೃದ್ಧಿಯ ವಿಷಯವನ್ನು ಪಕ್ಷಾತೀತವಾಗಿ, ರಾಜಕೀಯವನ್ನು ಬದಿಗಿಟ್ಟು ಎಲ್ಲ ಶಾಸಕರು ಒಟ್ಟಾಗಿ ಮುಖ್ಯಮಂತ್ರಿಗೆ ಮನವರಿಕೆ ಮಾಡುತ್ತಿಲ್ಲ. ಜನರೊಂದಿಗೆ ಗಟ್ಟಿಯಾಗಿ ಕುಳಿತುಕೊಳ್ಳುತ್ತಿಲ್ಲ. ತಮ್ಮ ಕ್ಷೇತ್ರಕ್ಕೆ ಸಿಮೀತವಾಗಿಯೇ ಶಾಸಕರು ಒಬ್ಬೊಬ್ಬರಾಗಿ ಸರ್ಕಾರದ ಗಮನ ಸೆಳೆಯುತ್ತಿದ್ದಾರೆ. ಇದಕ್ಕೆ ಸ್ಪಂದಿಸದ ಸರ್ಕಾರದ ವಿರುದ್ಧ ಶಾಸಕರೆಲ್ಲರೂ ಒಟ್ಟಾಗಿ ಒತ್ತಡ ಹೇರುವ ಕೆಲಸ ಮಾಡುತ್ತಿಲ್ಲ. ಅಧಿಕಾರಕ್ಕೆ ಅಂಟಿಕೊಂಟಿದ್ದಾರೆ ವಿನಾ ಅಭಿವೃದ್ಧಿಗೆ ಬದ್ಧವಾಗಿಲ್ಲ' ಎಂದು ಏಮ್ಸ್‌ ಹೋರಾಟವನ್ನು ಬೆಂಬಲಿಸುತ್ತಿರುವ ಪ್ರಜ್ಞಾವಂತ ನಾಗರೀಕರು ಆರೋಪಿಸುತ್ತಿದ್ದಾರೆ.

Edited By : Nagaraj Tulugeri
PublicNext

PublicNext

25/09/2022 12:33 pm

Cinque Terre

16.28 K

Cinque Terre

0