ರಾಯಚೂರು : ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆಯುತ್ತಿರೋ ಜನ ಸಂಕಲ್ಪ ಯಾತ್ರೆಗಾಗಿ ಬಿಜೆಪಿ 80 ಅಡಿ ಉದ್ದದ ಶಾಲಾ ಕಾಂಪೌಂಡ್ ಧ್ವಂಸಗೊಳಿಸಿದೆ ಇದು ಎಷ್ಟರಮಟ್ಟಿಗೆ ಸರಿ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.
ಹೌದು ರಾಯಚೂರು ಜಿಲ್ಲೆಯ ಗಿಲ್ಲೆಸೂಗೂರು ಗ್ರಾಮದಲ್ಲಿ ಇಂದು ಸಿಎಂ ಮತ್ತು ಮಾಜಿ ಸಿಎಂ ನೇತೃತ್ವದಲ್ಲಿ ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. ಒಂದು ಕಾರ್ಯಕ್ರಮವನ್ನು ಸರ್ಕಾರಿ ಶಾಲಾ ಆವರಣದಲ್ಲಿ ಮಾಡಲಾಗುತ್ತಿದ್ದು. ಕಾರ್ಯಕ್ರಮಕ್ಕೆ ಅಡ್ಡಿಯಾದ ಶಾಲೆಯ ತಡೆ ಗೋಡೆಯನ್ನ ಎಸಿಬಿ ಮೂಲಜ ಹೊಡೆದುರಳಿಸಲಾಗಿದೆ. 7 ಅಡಿ ಎತ್ತರ 80 ಅಡಿ ಉದ್ದದ ಸುಸಜ್ಜಿತ ಶಾಲಾ ಗೋಡೆಯನ್ನ ಹೊಡೆದು ನಡೆಸುತ್ತಿರೋ ಕಾರ್ಯಕ್ರಮದಲ್ಲಿ 50ಸಾವಿರ ಜನ ಸೇರಿಸೋ ನಿರೀಕ್ಷೆ ಇದೆ ಹೀಗಾಗಿ ಕಾಂಪೌಂಡ್ ಧ್ವಂಸಮಾಡಲಾಗಿದೆ.
ಇಂದು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆಯುತ್ತಿರೋ ಕಾರ್ಯಕ್ರಮಕ್ಕಾಗಿ, ಎಸ್ಪಿ ಕಣ್ಮುಂದೆಯೇ ಕಾಂಪೌಂಡ್ ಧ್ವಂಸಗೊಳಿಸಿದ್ರೂ ಡೋಂಟ್ ಕೇರ್.
ಲಕ್ಷಾಂತರ ರೂ. ವೆಚ್ಚ ಮಾಡಿ ನಿರ್ಮಿಸಿರೋ ಶಾಲಾ ಕಾಂಪೌಂಡ್ ಹೊಡೆದುರುಳಿಸಿದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
PublicNext
11/10/2022 12:11 pm