ರಾಯಚೂರು: ಸಂತೆ, ಜಾತ್ರೆ, ತರಕಾರಿ ಮಾರಕಟ್ಟೆ ಹಾಗೂ ಉತ್ಸವಗಳಲ್ಲಿ ಜಿಲ್ಲೆಯಾದ್ಯಂತ ಜನರು ಕಳೆದುಕೊಂಡಿದ್ದ 196 ಮೊಬೈಲ್‌ಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈ ಮೊಬೈಲ್‌ಗಳನ್ನು ವಾರಸುದಾರರಿಗೆ ಮರಳಿಸುವ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಅವರು ಚಾಲನೆ ನೀಡಿದರು.
ಸಾಂಕೇತಿಕವಾಗಿ ಕೆಲವರಿಗೆ ಮೊಬೈಲ್‌ಗಳನ್ನು ಮರಳಿಸಿದ್ದು, ಆಯಾ ಪೊಲೀಸ್ ಠಾಣೆಗಳ ಮೂಲಕ ಇನ್ನುಳಿದ ಮೊಬೈಲ್‌ಗಳನ್ನು ವಾರಸುದಾರರಿಗೆ ತಲುಪಿಸಲಾಗುತ್ತದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಆರ್. ಅವರ ಮಾರ್ಗದರ್ಶನದಲ್ಲಿ ರಾಯಚೂರು, ಸಿಂಧನೂರು ಮತ್ತು ಲಿಂಗಸುಗೂರು ಉಪವಿಭಾಗಗಳ ಪೊಲೀಸರು, ಮೊಬೈಲ್‌ಗಳನ್ನು ಪತ್ತೆ ಮಾಡುವುದಕ್ಕೆ ವೈಜ್ಞಾನಿಕ ವಿಧಾನಗಳನ್ನು ಅನುಸರಿಸರಿಸಿದ್ದರು. ಬಹಳಷ್ಟು ಸಂದರ್ಭಗಳಲ್ಲಿ ಸಾರ್ವಜನಿಕರು ತಮ್ಮ ನಿರ್ಲಕ್ಷ್ಯದಿಂದಲೇ ಮೊಬೈಲ್ ಕಳೆದುಕೊಂಡಿರುವುದು ಗೊತ್ತಾಗಿದೆ. ಹೀಗಾಗಿ ಬೆಳೆಬಾಳುವ ಮೊಬೈಲ್ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ನಿಖಿಲ್ ಬಿ. ಕೋರಿದ್ದಾರೆ.
Kshetra Samachara
01/10/2022 09:47 am