ರಾಯಚೂರು: ಸಮಾಜದಲ್ಲಿ ಶಾಂತಿಭಂಗ ಆರೋಪ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಇಬ್ಬರು ಪಿಎಫ್ಐ ಮುಖಂಡರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪಿಎಫ್ಐ ಮಾಜಿ ಅಧ್ಯಕ್ಷ ಮಹಮದ್ ಇಸ್ಮಾಯಿಲ್ ಹಾಗೂ ಕಾರ್ಯದರ್ಶಿ ಆಸೀಂನನ್ನು ಪೊಲೀಸರು ಬೆಳಗಿನ ಜಾವ 5 ಗಂಟೆಗೆ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕಾರ್ಯಾಚರಣೆಯು ರಾಯಚೂರು ಉಪ ವಿಭಾಗದ ಡಿಎಸ್ ಪಿ ವೆಂಕಟೇಶ ಉಗಿಬಂಡಿ ಅವರ ನೇತೃತ್ವದ ತಂಡದಿಂದ ನಡೆದಿದೆ. ಆರೋಪಿಗಳನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.
PublicNext
27/09/2022 08:06 am