ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

PTCL ಕಾಯ್ದೆಗೆ ಕಾಲಮಿತಿ ಅನ್ವಯಿಸದಂತೆ ತಿದ್ದುಪಡಿ ಮಾಡಲು ಒತ್ತಾಯ

ರಾಯಚೂರು : ಕರ್ನಾಟಕ ಅನುಸೂಚಿತ ಜಾತಿ,ಅನುಸೂಚಿತ ಬುಡಕಟ್ಟುಗಳ ಕಾಯ್ದೆ -1978 (PTCL) ಕಾಯ್ದೆಗೆ ಕಾಲಮಿತಿ ಅನ್ವಯಿಸದಂತೆ ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿ ಪಿ.ಟಿ.ಸಿ.ಎಲ್ ಕಾಯ್ದೆ ಸಂರಕ್ಷಣಾ ಸಮಿತಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಕರ್ನಾಟಕ ಅನುಸೂಚಿತ ಜಾತಿ ಅನುಸೂಚಿತ ಬುಡಕಟ್ಟುಗಳ ( ಕೆಲವು ಜಮೀನುಗಳ ಪರಭಾರೆ ನಿಷೇಧ ) ಕಾಯ್ದೆ -1978 (PTCL) ಕ್ಕೆ ಕಾಲಮಿತಿ ಅನ್ವಯಿಸದಂತೆ ಕಾಯ್ದೆ ತಿದ್ದುಪಡಿಯನ್ನು ಸರಕಾರ ಕೂಡಲೇ ಮಾಡಬೇಕು ಎಂದು ಆಗ್ರಹಿಸಿದರು

ಪಿ.ಟಿ.ಸಿ.ಎಲ್.ಕಾಯ್ದೆ ಜಾರಿಗೆ ತಂದಿರುವ ಸರ್ಕಾರದ ಮುಖ್ಯ ಉದ್ದೇಶ ನೂರಾರು ವರ್ಷಗಳಿಂದ ಅಸ್ಪೃಶ್ಯತೆ , ಅನಕ್ಷರತೆ , ಬಡತನದಿಂದ ಬಳಲುತ್ತಿದ್ದ ಈ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಹಾಗೂ ಆರ್ಥಿಕವಾಗಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಮೂಲ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ.

ಈ ಕಾಯ್ದೆ ಅನ್ವಯ ಅನಕ್ಷರತೆ ಹಾಗೂ ಬಡತನದ ಕಾರಣದಿಂದ ಪರಭಾರೆ ಮಾಡಿರುವ ಮೂಲ ಮಂಜೂರಾತಿದಾರರು ಹಾಗೂ ಅವರ ವಾರಸುದಾರರು ಕಲಂ : 5ರ ಅಡಿಯಲ್ಲಿ ಉಪವಿಭಾಗಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಇಲ್ಲವೇ ಉಪವಿಭಾಗಾಧಿಕಾರಿಗಳೇ ಸೋ – ಮೋಟೋ / ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಮೂಲ ವಾರಸುದಾರರಿಗೆ ಭೂಮಿಯನ್ನು ಪುನಃ ಪ್ರಾಪ್ತಿ ಮಾಡುವ ಕಾಯ್ದೆ ಚಾಲ್ತಿಯಲ್ಲಿತ್ತು . ಆದರೆ ಇತ್ತೀಚಿಗೆ 2017 ರಲ್ಲಿ ಬಂದ ಸರ್ವೋಚ್ಚ ನ್ಯಾಯಾಲಯದ ನೆಕ್ಕಿಂಟಿ ರಾಮಲಕ್ಷ್ಮಿ ವಿರುದ್ಧ ಕರ್ನಾಟಕ ರಾಜ್ಯ ಸರ್ಕಾರ ಈ ಪ್ರಕರಣದ ಆಧಾರದ ಮೇಲೆ ಪರಭಾರೆ ಮಾಡಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜಮೀನುಗಳ ಪುನರ್ ಪ್ರಾಪ್ತಿಗಾಗಿ ಸಲ್ಲಿಸಿರುವ ಎಲ್ಲಾ ಅರ್ಜಿಗಳನ್ನು ಕಾಲಮಿತಿ ನೆಪವೊಡ್ಡಿ ತಿರಸ್ಕಾರ ಮಾಡಿ ವಜಾ ಮಾಡುತ್ತಿದ್ದಾರೆ ಎಂದು ದೂರಿದರು.

Edited By : Nirmala Aralikatti
Kshetra Samachara

Kshetra Samachara

21/09/2022 05:55 pm

Cinque Terre

1.58 K

Cinque Terre

0