ರಾಯಚೂರು: ಗಾಂಜಾ ಮಿಶ್ರಿತ ಚಾಕೊಲೇಟ್ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪದ ಮೇರೆಗೆ ನಗರದ 8 ಅಂಗಡಿಗಳ ಮೇಲೆ ಅಬಕಾರಿ ಅಧಿಕಾರಿಗಳ ತಂಡವು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ದಾಳಿಯಲ್ಲಿ ಯಾವದೇ ಅಮುಲು ಬರುವ ಚಾಕೊಲೇಟ್ ದೊರಕಿಲ್ಲ ಎಂದು ಹೇಳಲಾಗಿದೆ.
ನಗರದ ಬಂಗಿಕುಂಟಾ, ಮಹಾವೀರ ವೃತ್ತ ಸೇರಿದಂತೆ ಕಿರಾಣಿ ಹಾಗೂ ಪಾನ್‌ಶಾಪಗಳ ಮೇಲೆ ದಾಳಿ ನಡೆಸಲಾಗಿತ್ತು. ಈ ಸಂಬಂಧ ಮಾಹಿತಿ ನೀಡಿರುವ ಅಬಕಾರಿ ನಿರೀಕ್ಷಕ ಅಧಿಕಾರಿ ಹನುಮಂತಪ್ಪ ಗುತ್ತಿಗೆದಾರ, ಯಾದಗಿರಿ ಜಿಲ್ಲೆಯ ಸುರುಪುರು ಮತ್ತು ಶಹಪುರು ನಗರಗಳಲ್ಲಿ ಗಾಂಜಾ ಮಿಶ್ರಿತ ಚಾಕೊಲೋಟ್ ಪತ್ತೆಯಾಗಿರುವ ಹಿನ್ನಲೆಯಲ್ಲಿ ರಾಯಚೂರು ನಗರದಲ್ಲಿಯೂ ಮಾರಾಟ ಮಾಡುತ್ತಿರು ಅನಾಮಧೇಯ ಮಾಹಿತಿ ಮೇರೆಗೆ ಧಾಳಿ ನಡೆಸಲಾಗಿದೆ. ಇನ್ನೂ ದಾಳಿ ವೇಳೆ ಯಾವುದೇ ಚಾಕೊಲೇಟ್ ಪತ್ತೆಯಾಗಿಲ್ಲ. ಸಾರ್ವಜನಿಕರು ಮಾಹಿತಿ ಇದ್ದರೆ ಅಬಕಾರಿ ಇಲಾಖೆ ಮಾಹಿತಿ ನೀಡುವಂತೆ ಮನವಿ ಮಾಡಿದರು. ದಾಳಿಯನ್ನು ಮುಂದುವರೆಸಲಾಗುತ್ತದೆ ಎಂದರು.
ವ್ಯಾಪಾರಿ ಶ್ರೀಪಾದ ಕೊಠಾರಿ ಮಾತನಾಡಿ ಅಬಕಾರಿ ಇಲಾಖೆ ಅಧಿಕಾರಿಗಳು ಕೇವಲ ಜೈನ್ ಸಮುದಾಯದವರನ್ನು ಮಾತ್ರ ಗುರಿ ಮಾಡಿ ದಾಳಿ ನಡೆಸಿದ್ದಾರೆ. ಯಾವುದೇ ಖಚಿತ ಮಾಹಿತಿಯಿಲ್ಲದೇ ದಾಳಿ ನಡೆಸಿ ವ್ಯಾಪಾರಕ್ಕೆ ಅನಗತ್ಯ ತೊಂದರೆ ಕೊಟ್ಟಿದ್ದಾರೆ.
ಪಾನ್ ಶಾಪ್, ಕಿರಾಣಿ ಅಂಗಡಿಗಳ ವಸ್ತುಗಳನ್ನು ರಸ್ತೆ ಹಾಕಿ ತನಿಖೆ ಮಾಡಿದ್ದಾರೆ. ಅವರು ಪೂರ್ವ ಮಾಹಿತಿ ಇದ್ದರೆ ವ್ಯಾಪಾರಿಗಳೊಂದಿಗೆ ಚರ್ಚಿಸಿ ಪರಿಶೀಲಿಸಲಿ, ಏಕಾಎಕಿ ಬಂದು ಅಧಿಕಾರಿಗಳು ತನಿಖೆ ಹೆಸರಿನಲ್ಲಿ ತೊಂದರೆ ಕೊಡುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ದೂರಿದ್ದಾರೆ. ಈ ಸಂದರ್ಭದಲ್ಲಿ ಅಬಕಾರಿ ಡಿವೈಎಸ್ಪಿ ಸಿಪಿಐ ಸೇರಿದಂತೆ ಸಿಬ್ಬಂದಿ ದಾಳಿಯಲ್ಲಿದ್ದರು.
PublicNext
24/09/2022 10:27 am