ರಾಯಚೂರು : ಉದ್ಯಾನ್ ಎಕ್ಸ್‌ಪ್ರೆಸ್ 11301 ಭಾರತೀಯ ರೈಲ್ವೆಯ ಕೇಂದ್ರ ವಲಯದಲ್ಲಿ ಕಾರ್ಯನಿರ್ವಹಿಸುವ ಎಕ್ಸ್‌ಪ್ರೆಸ್ ರೈಲು. ಈ ರೈಲು ಮಾರ್ಗವು ಮುಂಬೈ, ಮಹಾರಾಷ್ಟ್ರ, ಕರ್ನಾಟಕದ ಬೆಂಗಳೂರಿಗೆ ನಿವಾಸಿಗಳಿಗೆ ಸಂಪರ್ಕವನ್ನು ಒದಗಿಸುತ್ತದೆ.
ಇದು ದೈನಂದಿನ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ರಾಯಚೂರನಿಂದ ಬೆಂಗಳೂರಿಗೆ ಹೊರಡುತ್ತಿದ್ದ ಉದ್ಯಾನ ಟ್ರೇನ್ ಸಮಯ ಬದಲಾಗಿದೆ ಎಂದು ರೇಲ್ವೆ ಬೋರ್ಡ ಸದಸ್ಯರಾದ ಬಾಬುರಾವ್ ತಿಳಿಸಿದ್ದಾರೆ. ಉದ್ಯಾನ ಟ್ರೇನ್ ನಂಬರ್ 11301 ರೈಲು ರಾಯಚೂರುಗೆ ರಾತ್ರಿ 8.15ಕ್ಕೆ ಹೊರಟು ಬೆಳಿಗ್ಗೆ 6 ಗಂಟೆಗೆ ಬೆಂಗಳೂರು ತಲುಪುತ್ತದೆ. ಇದು ರಾಯಚೂರು ಜಿಲ್ಲೆ ಜನರ ಬಹುದಿನದ ಬೇಡಿಕೆಯಾಗಿತ್ತು. ಇವತ್ತು ಈಡೇರಿಸಲಾಗಿದೆ ಎಂದು ಬಾಬುರಾವ್ ಹರ್ಷ ವ್ಯಕ್ತಪಡಿಸಿದ್ದಾರೆ.
PublicNext
08/10/2022 01:26 pm