ಸಿಂಧನೂರ : ಪೀಕಪ್ ಡ್ಯಾಮ್ ಕಳೆಪ ಕಾಮಗಾರಿ ಮಾಡಿದ್ದನ್ನು ಕಂಡು ಮಾಜಿ ಮಂತ್ರಿಶಾಸಕ ವೆಂಕಟರಾವ ನಾಡಗೌಡ ಅಧಿಕಾರಿಗಳು ಹಾಗೂ ಗುತ್ತಿಗೆದಾರ ವಿರುದ್ಧ ಗರಂಯಾಗಿ ಕಳಪೆ ಕಾಮಗಾರಿಗೆ ಕಾರಣವಾದ ಅಧಿಕಾರಿಗಳನ್ನು ಅಮಾನತ್ತು ಮಾಡಿ ಗುತ್ತಿಗೆದಾರ ಮೇಲೆ ಕ್ರಮ ಕೈಗೊಳ್ಳುವಂತೆ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ತೀರ್ವವಾಗಿ ತರಾಟೆಗೆ ತೆಗೆದುಕೊಂಡರು.
ತಾಲೂಕಿನ ಕುನ್ನಟಗಿ ಗ್ರಾಮದಲ್ಲಿ ಒಂದು ಕೋಟಿ ವೆಚ್ಚದಲ್ಲಿ ಪೀಕಪ್ ಡ್ಯಾಮ್ ನಿರ್ಮಾಣ ಮಾಡಿ ಉದ್ಘಾಟನೆ ಮಾಡುವ ಮೊದಲೆ ಹೊಡೆದು ಹೋಗಿದ್ದು ಇದು ಕಳಪೆ ಕಾಮಗಾರಿ ಮಾಡಲಾಗಿದೆ. ಶಾಸಕರು ಶಾಮೀಲಾಗಿ ಹಣ ಲೂಟಿ ಮಾಡಿದ್ದಾರೆ ಕಾಂಗ್ರೆಸ್ ಮುಖಂಡರು ಆರೋಪಸಿದ್ದ ಕಾರಣ ಶಾಸಕ ವೆಂಕಟರಾವ ನಾಡಗೌಡ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ರು.
ಪೀಕಪ್ ಡ್ಯಾಮ್ ನಿರ್ಮಾಣ ಮಾಡುವಾಗ ಗ್ರಾಮಸ್ಥರು ದೊಡ್ಡ ಪೈಪ್ ಹಾಕಿ ಎಂದು ಹೇಳಿದ್ದರಿಂದ ದೊಡ್ಡ ಪೈಪ್ ಹಾಕಿದ್ದು ಅಲ್ಲದೆ ಹಳ್ಳಕ್ಕೆ ನೀರು ಬಂದ ಕಾರಣ ಪೀಕಪ್ ಹೊಡೆದು ಹೋಗಿದೆ. ಕಳೆಪಯಾಗಿದ್ದರೆ ಪರಿಶೀಲನೆ ಮಾಡಿ ಗುಣಮಟ್ಟದ ಕಾಮಗಾರಿಯನ್ನು ಮಾಡುವಂತೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆಯನ್ನು ನೀಡಿದ್ದೇನೆ. ಇನ್ನೂ ಬಿಲ್ ಸಹ ಮಾಡಿಲ್ಲ. ಹಣ ಲೂಟಿ ಮಾಡುವ ಪಶ್ನೆ ಬರುವದಿಲ್ಲ ಇದನ್ನೆ ದೊಡ್ಡ ಅಪರಾಧವೆನ್ನುವಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಆರೋಪ ಮಾಡಿದ್ದಾರೆ.
ನನ್ನ ಅಧಿಕಾರದ ಅವಧಿಯಲ್ಲಿ ಕಳಪೆ ಕಾಮಗಾರಿಗಳು ಮಾಡಿದ ಬಗ್ಗೆ ತೋರಿಸಿದರೆ ಅದನ್ನು ಸರಿಪಡಿಸುವದು ನನ್ನ ಜವಾಬ್ದಾರಿಯಾಗಿದೆ. ಪೀಕಪ್ ಡ್ಯಾಮ್ ಕಳಪೆ ಮಾಡಿ ಅಧಿಕಾರಿಗಳೊಂದಿಗೆ ಶಾಮೀಲಾಗಿ ನಾನು ಹಣ ಲೂಟಿ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ. ನನ್ನ ಕುಟುಂಬದವರು ಯಾರು ಗುತ್ತಿಗೆದಾರಿಕೆ ಮಾಡುತ್ತಿಲ್ಲ. ಆದ್ರೆ ಬಾದರ್ಲಿ ಕುಟುಂಬದವರು ಗುತ್ತಿಗೆದಾರಿಕೆ ಮಾಡುವದು ಇಡಿ ತಾಲೂಕಿನ ಜನತೆಗೆ ಗೊತ್ತಿದೆ ಎಂದು ತಿರುಗೇಟು ನೀಡಿದ್ದಾರೆ.
Kshetra Samachara
07/10/2022 08:54 am