ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು: ಶಾಶ್ವತ ಪರಿಹಾರ ಒದಗಿಸುವಲ್ಲಿ ಜಿಲ್ಲಾಡಳಿತ ನಗರಸಭೆ ವಿಫಲ

ರಾಯಚೂರು: ಪ್ರತಿ ಬಾರಿ ದೊಡ್ಡ ಮಳೆಯಾದಾಗ ನಗರದ ಸ್ಲಂ ಬಡಾವಣೆಯಲ್ಲಿ ಮನೆಗೆ ನೀರು ನುಗ್ಗುವ ಪ್ರಸಂಗಗಳು ಎದುರಾಗುತ್ತಿದೆ. ನಿವಾಸಿಗಳು ಪ್ರಾಣಭಯದಲ್ಲಿ ವಾಸಿಸುವ ಪ್ರಸಂಗ ಎದುರಾಗಿದೆ. ಆದ್ರೆ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಜನಪ್ರತಿನಿಧಿ, ಜಿಲ್ಲಾಡಳಿತ, ನಗರಸಭೆಗಳು ವಿಫಲವಾಗಿವೆ.

ರಾಯಚೂರು ನಗರದ ಸಿಯಾತಲಾಬ್, ಅರಬ್ ಮೊಹಲ್ಲ ಸೇರಿದಂತೆ ಹಲವು ಸ್ಲಂ ಬಡಾವಣೆಗಳು ಪ್ರತಿ ವರ್ಷ ಮಳೆಗಾಲದಲ್ಲಿ ಜೀವ ಭಯದಲ್ಲಿ ಕಾಲ ಕಳಿಯುವ ಪರಿಸ್ಥಿತಿ ಇದ್ದರೂ ಕೂಡ ಶಾಶ್ವತ ಪರಿಹಾರ ಸಿಗುವುದು ಕನಸಿನ ಮಾತಾಗಿದೆ. ಮಳೆ ಬಂದು ಮನೆಗೆ ನೀರನ್ನು ನುಗ್ಗುವುದು, ಗೋಡೆ ಕುಸಿದು ಬೀಳುವುದು ಸರ್ವೆ ಸಾಮಾನ್ಯವಾಗಿ ಹೋಗಿದೆ. ಪ್ರತಿವರ್ಷ ಮಳೆ ಬಂದು ನೀರು ನುಗ್ಗಿದಾಗ ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡುತ್ತಾರೆ ಹೊರತು ಸಮಸ್ಯೆ ಬಗೆಹರಿಸುವತ್ತ ಕ್ರಮ ಕೈಗೊಳ್ಳುತ್ತಿಲ್ಲ.

ಇನ್ನು ಇಲ್ಲಿನ ನಿವಾಸಿಗಳಂತೂ ಈ ಒಂದು ಜೀವನ ಬೇಸತ್ತು ಹೋಗಿದ್ದು, ಯಾವಾಗ ಇದಕ್ಕೆ ಮುಕ್ತಿ ಸಿಗುತ್ತದೆಯೋ, ಶಾಶ್ವತ ಪರಿಹಾರ ಯಾವಾಗ ನೀಡುತ್ತಾರೋ ಎಂದು ಕಾದು ಕುಳಿತಿದ್ದಾರೆ. ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನಹರಿಸುವ ಮೂಲಕ ಇವರ ಸಮಸ್ಯೆಗಳಿಗೆ ಪರಿಹಾರ ನೀಡಬೇಕಿದೆ.

Edited By : Shivu K
PublicNext

PublicNext

03/10/2022 10:01 am

Cinque Terre

16.49 K

Cinque Terre

0