ರಾಯಚೂರು : ಚುನಾವಣೆ ಆಯೋಗದ ಸೂಚನೆಯಂತೆ ಅ.1 ರಿಂದ ಓಟರ್ ಐಡಿಗೆ ಆಧಾರ್ ಜೋಡಣೆಯ ಅಭಿಯಾನ ಪ್ರಾರಂಭವಾಗಲಿದ್ದು, ನಗರದ ಮತದಾರರು ಸಹಕರಿಸಬೇಕು ಎಂದು ಸಹಾಯಕ ಆಯುಕ್ತ ರಜನೀಕಾಂತ್ ಚವ್ಹಾಣ್ ಮನವಿ ಮಾಡಿದರು.
ರಾಯಚೂರು ನಗರ ವಿಧಾನ ಸಭಾ ಕ್ಷೇತ್ರದ ನೋಡಲ್ ಅಧಿಕಾರಿಯಾಗಿ ನೇಮಿಸಿದ ಹಿನ್ನಲೆ, ತಾವು ಕೂಡ ಮನೆ ಮನೆಗೆ ತೆರಳಿ ಮತದಾರರ ಮನವೊಲಿಸುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು. ಬಿ.ಎಲ್.ಓ ಗಳು ಮನೆ ಬಾಗಿಲಿಗೆ ಬಂದಾಗ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಎರಡು ದಾಖಲಾತಿಗಳನ್ನು ನೀಡಿ ಸಹಕರಿಸಬೇಕು.
ಆಧಾರ್ ಜೋಡಣೆಯಿಂದ ಎರಡೆರಡು ಕಡೆ ಮತದಾರರ ಪಟ್ಟಿಯಲ್ಲಿದ್ದ ಹೆಸರುಗಳನ್ನು ತೆಗೆದು ಹಾಕಲು ಅನುಕೂಲವಾಗುತ್ತದೆ. ಅದಲ್ಲದೆ ಮರಣ ಹೊಂದಿದವರ ಮಾಹಿತಿ ಲಭಿಸಿದಂತಾಗುತ್ತದೆ ಎಂದರು.
ನಿಖರ ಮತದಾರ ಪಟ್ಟಿ ಸಿದ್ಧಪಡಿಸಲು ಸಾಧ್ಯವಾಗುತ್ತದೆ. ಆದ್ದರಿಂದ ನಗರ ಕ್ಷೇತ್ರದ ಮತದಾರರ ಸ್ವಯಂ ಪ್ರೇರಿತರಾಗಿ ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಬೇಕು ಎಂದರು. ಈಗಾಗಲೇ ಸಿಎಂಸಿಯಲ್ಲಿ ಒಂದು ಸಭೆಯನ್ನು ನಡೆಸಲಾಗಿದೆ.ಇಷ್ಟರಲ್ಲಿಯೇ ನಗರಸಭೆ ಸದಸ್ಯರ ಸಭೆಯನ್ನು ಆಯೋಜಿಸಲಾಗಿದೆ.
ಅಧಿಕಾರಿಗಳ ಸಭೆಯನ್ನು ನಡೆಸಲಾಗುವುದು. ಈಗ ನಗರ ಕ್ಷೇತ್ರದಲ್ಲಿ ಕೇವಲ 46% ಮತದಾರರು ಮಾತ್ರ ಮತದಾರರ ಗುರುತಿನ ಚೀಟಿಗೆ ಆಧಾರ ಲಿಂಕ್ ಮಾಡಿಕೊಂಡಿದ್ದಾರೆ. ಮತದಾರರು ಸಹಕರಿಸಿದರೆ ಶೇ.90ಕ್ಕೂ ಅಧಿಕ ಪ್ರತಿಶತ ಕಾರ್ಯಸಾಧನೆ ಮಾಡಬಹುದಾಗಿದೆ ಎಂದರು.
PublicNext
27/09/2022 05:43 pm