ರಾಯಚೂರು : ನಗರದ ಯುವತಿಯೋರ್ವಳು ತನ್ನ ಪಾಲಿನ ಆಸ್ತಿ ಸಂಪತ್ತನ್ನೆಲ್ಲಾ ಬಿಟ್ಟು ಅತ್ಯಂತ ಕಠಿಣ ಆಚರಣೆಯ ಜೈನ್ ಭಗವತಿ ದೀಕ್ಷೆ ಪಡೆದಿದ್ದಾಳೆ.
ನಗರದ ವ್ಯಾಪಾರಿ ಜ್ಞಾನಚಂದ್ ಭಂಡಾರಿ ಪುತ್ರಿ 25 ವರ್ಷದ ಸ್ನೇಹ ಭಂಡಾರಿ ಇಂದು ಅಲೌಕಿಕ ಜೀವನಕ್ಕೆ ಕಾಲಿಟ್ಟಿದ್ದಾಳೆ.
ಹೌದು ಅತ್ಯಂತ ಕಠಿಣ ನಿಯಮಗಳನ್ನು ಪಾಲಿಸಬೇಕಿರುವ ಜೈನ ಸನ್ಯಾಸತ್ವವನ್ನ ಅಷ್ಟು ಸುಲಭವಾಗಿ ಯಾರೂ ಸ್ವೀಕರಿಸುವುದಿಲ್ಲ. ಹೀಗಾಗಿ ಜೈನ್ ಧರ್ಮದಲ್ಲಿ ಸನ್ಯಾಸತ್ವ ಪಡೆಯುವುದು ಬಹಳ ಮಹತ್ವದ ಕಾರ್ಯವಾಗಿದೆ. ಬಿಕಾಂ ಪದವಿ ಪೂರೈಸಿರುವ ಸ್ನೇಹಾ ಭಂಡಾರಿ ಈ ಕಠಿಣ ನಿರ್ಧಾರ ಮಾಡಿದ್ದು. ನಗರದಲ್ಲಿ ಶೋಭಾಯಾತ್ರೆ ಮೂಲಕ ಯುವತಿಯ ಮೆರವಣಿಗೆ ಮಾಡಲಾಯಿತು. ನಗರದ ಎಸ್ ಆರ್ ಪಿ ಎಸ್ ಪಿಯು ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೈನ್ ಭಗವತಿ ದೀಕ್ಷೆ ನೀಡಲಾಯಿತು.
ಕಾರ್ಯಕ್ರಮಕ್ಕೆ ದೇಶದ ವಿವಿಧೆಡೆಯಿಂದ ನೂರಾರು ಜನ ಜೈನ್ ಸಮುದಾಯದವರು ಆಗಮಿಸಿದ್ದರು. 2013 ರಲ್ಲಿ ನಗರದ ಯುವತಿಯೊಬ್ಬಳು ಸನ್ಯಾಸತ್ವ ಪಡೆದಿದ್ದಳು, ಈಗ ಒಂಭತ್ತು ವರ್ಷಗಳ ಬಳಿಕ ರಾಯಚೂರು ಜಿಲ್ಲೆಯಿಂದ ಮತ್ತೊಬ್ಬ ಯುವತಿ ಸನ್ಯಾಸತ್ವ ಪಡೆದಿದ್ದಾಳೆ.
PublicNext
06/10/2022 01:05 pm