ರಾಯಚೂರು : ರಾಜ್ಯಾದ್ಯಂತ ಮಾಡಲಾಗುತ್ತಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಕೇವಲ ಹೆಸರಿಗಷ್ಟೇ ಆಗುತ್ತಿದೆ ಹೊರತು ಸಮಸ್ಯೆಗಳು ಬಗೆಹರಿಯುತ್ತಿಲ್ಲ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಪ್ಪ ಮರಳಿ ಅಸಮಾಧಾನ ವ್ಯಕ್ತಪಡಿಸಿದರು.
ಹೌದು ರಾಯಚೂರು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವೇನೋ ಮಾಡಲಾಗುತ್ತಿದೆ. ಆದರೆ ಈ ಒಂದು ಕಾರ್ಯಕ್ರಮದಲ್ಲಿ ರೈತರು ತಮ್ಮ ಹೊಲಗಳ ರಸ್ತೆಗಳು ದಿವಾಳಿಯಾಗಿರುವ ಬಗ್ಗೆ, ಹೊಲಗಳು ಸರ್ವೆ ಆಗುತ್ತಿಲ್ಲ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಬ್ರೋಕರ್ ಗಳ ಹಾವಳಿ ಹೆಚ್ಚಿದೆ. ಎಪಿಎಂಸಿಯಲ್ಲಿ ಸೂಟು ಮುರಿಯುತ್ತಿದ್ದಾರೆ, ಖರೀದಿ ಕೇಂದ್ರಗಳನ್ನು ತೆರೆಯುವಲ್ಲಿ ಜಿಲ್ಲಾಡಳಿತ ನಿರ್ಲಕ್ಷ ವಹಿಸುತ್ತಿವೆ ಎಂಬ ರೀತಿಯಲ್ಲಿ ಸಾಕಷ್ಟು ದೂರುಗಳನ್ನು ಸಲ್ಲಿಸುತ್ತಿದ್ದರೂ, ಯಾವೊಂದು ದೂರುಗಳಿಗೂ ಪರಿಹಾರ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವಿಷಯವನ್ನ ಮುಂದಿಟ್ಟುಕೊಂಡು ಇದೆ ಅ.10 ರಂದು ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸುವ ಮೂಲಕ, ಈ ಒಂದು ಕಾರ್ಯಕ್ರಮದ ವೈಫಲ್ಯದ ಬಗ್ಗೆ ಅವರ ಗಮನಕ್ಕೆ ತರುವ ಕೆಲಸ ಮಾಡುತ್ತೇವೆ. ಆಗಲೂ ಇದೇ ಪರಿಸ್ಥಿತಿ ಮುಂದುವರೆದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.
Kshetra Samachara
09/10/2022 11:04 am