ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು : ಮೊಬೈಲ್‌ ಅಭ್ಯಾಸ ಮಾಡಿವರಿಗೂ, ಪುಸ್ತಕದಲ್ಲಿ ಅಭ್ಯಾಸ ಮಾಡಿದವರಿಗೂ ಬಹಳ ವ್ಯತ್ಯಾಸವಿದೆ

ಸಿರವಾರ : ಶಾಲೆ ಕಾಲೇಜುಗಳಲ್ಲಿ ಮಾಡುವ ಪಾಠಗಳನ್ನು ಮೊಬೈಲ್‌ನಲ್ಲಿ ಅಭ್ಯಾಸ ಮಾಡುವುದು ಬಹಳ ಅಪಾಯಕಾರಿಯಾಗಿದೆ, ಪುಸ್ತಕ ಹಿಡಿದು ಓದಿದರೆ ಮಸ್ತಕಕ್ಕೆ ಹೋಗುತ್ತದೆ. ಮೊಬೈಲ್ ಅಭ್ಯಾಸ ಮಾಡಿವರಿಗೂ, ಪುಸ್ತಕದಲ್ಲಿ ಅಭ್ಯಾಸ ಮಾಡಿದವರಿಗೂ ಬಹಳಷ್ಟು ವ್ಯತ್ಯಾಸಗಳು ಇವೆ ಅದನ್ನು ತಿಳಿದು ಅಭ್ಯಾಸ ಮಾಡಿ ಗುರಿ ಮುಟ್ಟಬೆಕು ಎಂದು ತಹಸೀಲ್ದಾರ ವಿಜಯೇಂದ್ರ ಹುಲಿನಾಯಕ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಪಟ್ಟಣದ ಬಸವೇಶ್ವರ ಪದವಿ ಪೂರ್ವ ಪದವಿ ಮಹಾವಿದ್ಯಾಲಯದ ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ವಾರ್ಷಿಕ ಚಟುವಟಿಕೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೊವೀಡ್ ಪೂರ್ವದಲ್ಲಿ ೯೦% ವಿದ್ಯಾರ್ಥಿಗಳು ಶಾಲೆ, ಕಾಲೇಜು ವಿಷಯಗಳನ್ನು ಪುಸ್ತಕದಲ್ಲಿ ಅಭ್ಯಾಸ ಮಾಡುತ್ತಿದ್ದರು. ಆದರೆ ಈಗ ಅನೇಕ ವಿದ್ಯಾರ್ಥಿಗಳು ಮೊಬೈಲ್ ನಲ್ಲಿ ಪಠ್ಯಗಳನ್ನು ಅಭ್ಯಾಸ ಮಾಡುತ್ತಿರುವುದು ತಪ್ಪು.

ಪುಸ್ತಕದಲ್ಲಿ ಅಭ್ಯಾಸ ಮಾಡುವುದರಿಂದ ವಿಷಯ ಗ್ರಹಿಕೆ ಹೆಚ್ಚಾಗುತ್ತದೆ. ಮೊಬೈಲ್‌ನಿಂದ ಏಕಾಗ್ರತೆ ಕಡಿಮೆಯಾಗುತ್ತದೆ. ಮೊಬೈಲ್ ಸಂದೆಶಗಳು, ಕರೆಗಳು ಬಂದಾಗ ಮನಸ್ಸು ಆ ವಿಷಯದ ಕಡೆ ಹೋಗಿ ಪಾಠ ಮನನ ಆಗುವುದಿಲ್ಲ. ವಿದ್ಯಾರ್ಥಿಗಳು ಜೀವನ ಗುರಿ, ಗುರು ಇದ್ದಾಗ ಸಾಧನೆ ಮಾಡಬಹುದು. ಶಿಸ್ತು ಕಠಿಣ ಪರಿಶ್ರಮ ಪಟ್ಟರೆ ಹೆತ್ತವರ ಕಾಣುತ್ತಿರುವ ಕನಸು ನನಸು ಮಾಡಲು ಸಾದ್ಯ. ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ, ದುಶ್ಚಟಗಳಿಗೆ ದಾಸರಾಗಬೇಡಿ. 371ಜೆ ಕಲಂ ನಮ್ಮ ಭಾಗದವರಿಗೆ ವರದಾನವಾಗಿದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ರಾಯಚೂರು ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾದ್ಯಾಪಕರಾದ ಜೆ.ಎಲ್ ಈರಣ್ಣ ವಿಶೇಷ ಉಪನ್ಯಾಸಕ ನೀಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಅದ್ಯಕ್ಷ ನರಸಿಂಹರಾವ ಕುಲಕರ್ಣಿ, ಉಪಾದ್ಯಕ್ಷ ಶಿವರಾರೆಡ್ಡಿ, ನಿರ್ಧೇಶಕರಾದ ವಿಜಯಕುಮಾರ ಗುಡದಮನೆ, ಚನ್ನಪ್ಪ ಬಡಿಗೇರ, ಪ್ರಾಚಾರ್ಯರಾದ ಡಾ.ಧರ್ಮಣ್ಣ,ಸೇರಿದಂತೆ ಕಾಲೇಜು ಆಡಳಿತ ಮಂಡಳಿ ಉಪಸ್ಥಿತರಿದ್ದರು.

Edited By : Abhishek Kamoji
Kshetra Samachara

Kshetra Samachara

19/09/2022 04:58 pm

Cinque Terre

3.14 K

Cinque Terre

0