ರಾಯಚೂರು : ವಾಲ್ಮೀಕಿ ಜಯಂತಿ ಅಂಗವಾಗಿ ರಾಯಚೂರು ಬಿಜೆಪಿ ST ಮೋರ್ಚಾ ವತಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ರ‍್ಯಾಲಿ ಮಾಡಿ ಪಟಾಕಿ ಸೇರಿಸಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.
ಎಸ್ ಟಿ ಮೋರ್ಚಾದ ರಾಜ್ಯಾಧ್ಯಕ್ಷ ಹಾಗೂ ರಾಯಚೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಅವರ ನೇತೃತ್ವದಲ್ಲಿ, ಇಂದು ರಾಯಚೂರು ನಗರದ ಪ್ರಮುಖ ಬೀದಿಗಳ ಮುಖಾಂತರ ವಾಲ್ಮೀಕಿ ವೃತ್ತದ ವರೆಗೆ ಬೈಕ ರ‍್ಯಾಲಿ ಮಾಡಲಾಯಿತು. ಈ ವೇಳೆ ವಾಲ್ಮೀಕಿ ವೃತ್ತದಲ್ಲಿ ಪಟಾಕಿ ಸಿಡಿಸಿ, ನಂತರ ಶ್ರೀ ಮಹರ್ಷಿ ವಾಲ್ಮೀಕಿ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಸಿಹಿ ತಿನಿಸಿ ಜಯಂತಿ ಆಚರಿಸಿದರು.
Kshetra Samachara
09/10/2022 03:37 pm