ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು: ಈ ಜಾತ್ರೇಲಿ ಮಹಿಳೆಯರೇ ರಥ ಎಳೆಯೋದು..

ಮಸ್ಕಿ: ನವರಾತ್ರಿ ಉತ್ಸವ ನಿಮಿತ್ತ ಪಟ್ಟಣದ ಭ್ರಮರಾಂಬಾ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಪುರಾಣ ಮಂಗಲ ಹಾಗೂ ದೇವಿಯ ರಥೋತ್ಸವ ಇಂದು ವೈಭವದಿಂದ ನಡೆಯಿತು. ನೂರಾರು ಮಹಿಳೆಯರು ರಥ ಎಳೆಯುವ ಮೂಲಕ ಭ್ರಮರಾಂಬಾ ದೇವಿಯ ಕೃಪೆಗೆ ಪಾತ್ರರಾದರು.

ಭ್ರಮರಾಂಬ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ನೂರಾರು ಭಕ್ತರ ಜಯಘೋಷಗಳ ನಡುವೆ ಭ್ರಮರಾಂಬಾ ದೇವಿಯ ಉತ್ಸವ ಮೂರ್ತಿಯನ್ನು ರಥದ ಮೇಲೆ ಪ್ರತಿಷ್ಠಾಪಿಸಲಾಯಿತು. ನಂತರ ಸಾಕಷ್ಟು ಮಹಿಳಾ ಭಕ್ತರು ಜಯಘೋಷ ಹಾಕಿ ಭಕ್ತರು ರಥಕ್ಕೆ ಉತ್ತುತ್ತಿ ಎಸೆದು ಭಕ್ತಿ ಸಮರ್ಪಿಸಿದರು.

ಮಸ್ಕಿ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಮಹಿಳೆಯರು ರಥದ ಮಿಣಿ ಹಿಡಿದು ರಥ ಎಳೆಯತೊಡಗಿದರು. ಹೆದ್ದಾರಿ ಪಕ್ಕದ ಪಾದಗಟ್ಟೆವರೆಗೆ ರಥ ಎಳೆದು ವಾಪಾಸು ಭ್ರಮರಾಂಬಾ ದೇವಸ್ಥಾನಕ್ಕೆ ತರಲಾಯಿತು. ಮಹಿಳೆಯರು ರಥ ಎಳೆಯುತ್ತಿದ್ದರೆ ಪುರುಷರು ಉತ್ತುತ್ತಿ ಎಸೆದು ಭಕ್ತಿ ಸಮರ್ಪಿಸಿದರು. ವಿವಿಧ ಜಾನಪದ ಕಲಾ ತಂಡಗಳು ಪಾಲ್ಗೊಂಡಿದ್ದವು.

Edited By : Manjunath H D
PublicNext

PublicNext

10/10/2022 09:02 pm

Cinque Terre

40.31 K

Cinque Terre

0