ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು: ಪಾಲಕರಿಂದ ತಪ್ಪಿಸಿಕೊಂಡ ಬಾಲಕ ಶವವಾಗಿ ಪತ್ತೆ

ರಾಯಚೂರು: ದೇವಸುಗೂರು ಗ್ರಾಮದ ರಂಜಿತ್ ಕುಮಾರ್ ಎಂಬ ಬಾಲಕ ಸಗಮಕುಂಟ ಗ್ರಾಮದಲ್ಲಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆಯಾದ ಘಟನೆ ಜರುಗಿದೆ.

ದೇವಸುಗೂರು ನಿವಾಸಿಗಳಾದ ಮಹೀಂದ್ರಾ, ಲಕ್ಷ್ಮಿ ದಂಪತಿಗಳ ಪುತ್ರ ರಂಜಿತ್ ಕುಮಾರ್ ಎಂಬ ಬಾಲಕ ರಾಯಚೂರು ತಾಲೂಕಿನ ಸಗಮಕುಂಟಾ ಗ್ರಾಮದಲ್ಲಿ ಕಾಣೆಯಾಗಿದ್ದ ಬಾಲಕ ಶವವಾಗಿ ದೊರಕಿದ್ದಾನೆ. ಸ್ನೇಹಿತರೊಂದಿಗೆ ಗ್ರಾಮದ ಹೊರವಲಯದಲ್ಲಿರುವ ಕಾಲುವೆಗೆ ಸ್ನೇಹಿತರೊಂದಿಗೆ ಈಜಲು ಹೋದ ಸಂಧರ್ಭದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಶಕ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಆದ್ರೆ ಪಾಲಕರು ಯಾವುದೇ ರೀತಿಯಾಗಿ ಅನುಮಾನ ಇಲ್ಲದ್ದರಿಂದ ಪೊಲೀಸರಿಗೆ ಮಾಹಿತಿ ನೀಡಿಲ್ಲ ಎಂದು ಹೇಳಿದರು.

Edited By : Nagaraj Tulugeri
PublicNext

PublicNext

09/10/2022 02:08 pm

Cinque Terre

14.78 K

Cinque Terre

0