ರಾಯಚೂರು : ನಡು ರಸ್ತೆಯಲ್ಲಿ ಬೈಕ್ ನಿಲ್ಲಿಸಿಕೊಂಡು ಯಾರದ್ದೂ ಭಯವಿಲ್ಲದೆ ಲಂಚದ ವ್ಯವಹಾರ ನಡೆಸಿದ ಪಿಡಿಓ ವಿಡಿಯೋ ಜಿಲ್ಲೆಯಾದ್ಯಂತ ವೈರಲ್ ಆಗಿದ್ದು ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಹೌದು ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಪಾಮನಕಲ್ಲೂರು ಪಿಡಿಒ ಅಮರೇಶ್ವಪ್ಪನ ಪರ್ಸೆಂಟೇಜ್ ವ್ಯವಹಾರದ ವಿಡಿಯೋ ಇದೀಗ ಸದ್ದು ಮಾಡುತ್ತಿದೆ. ನಡು ರಸ್ತೆಯಲ್ಲಿ ಬೈಕ್ ನಿಲ್ಲಿಸಿಕೊಂಡು ಪೋನ್‌ನಲ್ಲೇ ಡೀಲ್ ನಡೆಸಿದ ಪಿಡಿಒ, ವಿವಿಧ ಕಾಮಗಾರಿಗಳ ಬಗ್ಗೆ ಪರ್ಸೆಂಟೆಜ್ ವ್ಯವಹಾರ ಕುದುರಿಸುತ್ತಿದ್ದಾನೆ ಮಹಾಶಯ.
ಇನ್ನು ಪಿಡಿಓ ಅವರ ಫೋನ್ ಸಂಭಾಷಣೆ ಹೇಳುವುದಾದರೆ, ಕಾಮಗಾರಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಪರ್ಸೆಂಟೆಜ್ ಕೊಟ್ರ ನಾಳೆ ಕೆಲ್ಸ ಎಂಗ್ ಮಾಡ್ಬೇಕು, ಕೊಡ್ತಾರನು ಅವ್ರು.. ಒಂದ್ ಪರ್ಸೆಂಟೆಜ್ ಪಾ ಎಲ್ಲಾ ಕಡೆ, ಎಲ್ಲರೂ ಒಂದು ಪರ್ಸೆಂಟೆಜ್ ಕೊಡ್ತಾರ, ಮಾಡಿದ್ರ ಮಾಡು ಇಲ್ಲಂದ್ರ ಬಿಡು, ನಮ್ಮಿಂದ ಆಗಲ್ಲ ನೋಡಪ್ಪ ನೀನು ಏನಾರ ಮಾಡಿಕೋ..
ಈ ರೀತಿಯಾಗಿ ವ್ಯಕ್ತಿಯೊಬ್ಬರೊಂದಿಗೆ ಪಿಡಿಒ ಪರ್ಸೆಂಟೆಜ್ ವ್ಯವಹಾರ ಯಾರದೇ ಭಯವಿಲ್ಲದೆ ನಡು ರಸ್ತೆಯಲ್ಲಿ ಮಾತನಾಡುತ್ತಿರುವುದು ನೋಡಿದರೆ ಎಷ್ಟು ಮಟ್ಟಿಗೆ ಪರ್ಸೆಂಟೇಜ್ ವ್ಯವಹಾರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯುತ್ತಿದೆ ಎಂದು ಊಹಿಸಬಹುದು. ಇನ್ನು ಅಧಿಕಾರಿಗಳು ಈ ಬಗ್ಗೆ ಏನು ಕ್ರಮ ಕೈಗೊಳ್ಳುತ್ತಾರೋ ಕಾದುನೋಡಬೇಕಿದೆ.
PublicNext
24/09/2022 07:02 pm