ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು: ಸಿಂಧನೂರು ಪೊಲೀಸರ ಭರ್ಜರಿ ಬೇಟೆ; ಮೂವರ ಬಂಧನ, ಚಿನ್ನ-ಬೆಳ್ಳಿ ವಶ

ಸಿಂಧನೂರು: ಸಿಂಧನೂರು ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದಂತಹ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ ಸಿಂಧನೂರು ಪೊಲೀಸರು ಆರೋಪಿಗಳಿಂದ ಚಿನ್ನ, ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಜು.16ರಂದು ರಾಮಕಿಶೋರ ಕಾಲೋನಿಯಲ್ಲಿ ಮನೆಯೊಂದರಲ್ಲು 130 ಗ್ರಾಂ.ಬಂಗಾರದ ನಾಣ್ಯಗಳು, ಮತ್ತು ಹಣ ಕಳ್ಳತನವಾಗಿತ್ತು. ಆ.24. ರಂದು ವೆಂಕಟೇಶ್ವರ ಕ್ಯಾಂಪಿನಲ್ಲಿನ ನಿವಾಸದಲ್ಲಿ 109 ಗ್ರಾಂ.ಬಂಗಾರದ ಆಭರಣ 2 ಕೆಜಿ ಬೆಳ್ಳಿ, ಹಣ, ಕಳ್ಳತನ ವಾಗಿತ್ತು. ರಾಯಚೂರು ಮತ್ತು ಸಿಂಧನೂರು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಖದೀಮರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿತರಿಂದ ಒಟ್ಟು 8‌ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ಹಣ, ಜಫ್ತಿ ಮಾಡಿಕೊಳ್ಳಲಾಗಿದೆ ಎಂದು ನಗರದ ಪೊಲೀಸ್ ‌ಉಪಾಧೀಕ್ಷಕರ ಕಾರ್ಯಾಲಯದಲ್ಲಿ ಡಿವೈಎಸ್ಪಿ ವೆಂಕಟಪ್ಪ ನಾಯಕ್ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

ಆರೋಪಿತರನ್ನ ಪತ್ತೆ ಮಾಡಿದ ತಂಡದ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಶ್ಲಾಘನೆ ವ್ಯಕ್ತಪಡಿಸಿದರು.

Edited By : Vijay Kumar
PublicNext

PublicNext

21/09/2022 08:41 pm

Cinque Terre

16.47 K

Cinque Terre

0