ರಾಯಚೂರು: ನಾಡಿನೆಲ್ಲೆಡೆ ಆಯುಧ ಪೂಜೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಆದರೆ ಆಯುಧ ಪೂಜೆಯ ಜವಾಬ್ದಾರಿ ಮರೆತು ನಾಡಬಂದೂಕಿನಿಂದ ಗುಂಡು ಹಾರಿಸಿ ವಿವಾದಕ್ಕೀಡಾಗಿದ್ದಾರೆ ಶಾಸಕ ಶಿವನಗೌಡ ನಾಯಕ.ಹೌದು ರಾಯಚೂರು ಜಿಲ್ಲೆಯ ದೇವದುರ್ಗ ಶಾಸಕ ಶಿವನಗೌಡ ನಾಯಕ ಅವರು 2-3 ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಸ್ವಗ್ರಾಮ ಅರಕೇರಾದ ಮನೆಯಲ್ಲಿ ಆಕಾಶದೆತ್ತರಕ್ಕೆ ಗುಂಡು ಹಾರಿಸಿ, ಆಯುಧ ಪೂಜೆ ಆಚರಿಸಿ ಸದ್ಯ ವಿವಾದಕ್ಕೆ ಗುರಿಯಾಗಿದ್ದಾರೆ.
ಸದ್ಯ ಶಾಸಕ ಶಿವನಗೌಡ ನಾಯಕ ಅವರು ಗಾಳಿಯಲ್ಲಿ ಗುಂಡು ಹಾರಿಸಿರುವ ವಿಡಿಯೋ ಇದೀಗ ಸಾಕಷ್ಟು ವೈರಲ್ ಆಗಿದ್ದು, ಅವ್ರು ಓರ್ವ ಜನ ಪ್ರತಿನಿಧಿಯಾಗಿ ಹೀಗೆ ಮಾಡಬಹುದೇ ಎಂಬ ವಾದ ವಿವಾದ ನೆಟ್ಟಿಗರದ್ದು.ಆದ್ರೆ ಶಾಸಕರು ಇದು ಹಳೆಯ ವಿಡಿಯೋ ಆಯುಧ ಪೂಜೆ ಹಿನ್ನೆಲೆ ಬೆಂಬಲಿಗರು ಮತ್ತೆ ಅದನ್ನು ವಾಟ್ಸ್ ಆ್ಯಪ್ ನಲ್ಲಿ ಹಾಕಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
PublicNext
05/10/2022 08:16 am