ರಾಯಚೂರು: ಸಿಂಧನೂರು ತಾಲೂಕು ಮತ್ತು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರು ಕಳೆದುಕೊಂಡ ಮೊಬೈಲ್‌ಗಳಲ್ಲಿ 5ಲಕ್ಷ ಮೌಲ್ಯದ 40 ಮೊಬೈಲ್‌ಗಳನ್ನು ಪತ್ತೆ ಹಚ್ಚಿದ ಸಿಂಧನೂರು ಪೊಲೀಸರು ಮಾಲೀಕರಿಗೆ ಒಪ್ಪಿಸಿದ್ದಾರೆ.
ಸಿಂಧನೂರು ನಗರ ಮತ್ತು ತಾಲೂಕಿನಲ್ಲಿ ಸಾರ್ವಜನಿಕರು ಯಾವುದೋ ಕಾರಣದಿಂದ ಕಳೆದುಕೊಂಡು ಮೊಬೈಲ್‌ಗಳನ್ನು ಪತ್ತೆ ಹಚ್ಚಿದ್ದು, ಈ ಕುರಿತು ಆಯಾ ವ್ಯಾಪ್ತಿಯ ಠಾಣೆಗಳಲ್ಲಿ ನೀಡಿದ ದೂರಿನ ಅನ್ವಯ ಮೊಬೈಲ್‌ಗಳನ್ನು ಡಿವೈಎಸ್ಪಿ ರವಿ ಕುಮಾರ, ಸಿಪಿಐ ಸಿಂಧನೂರು ರವರ ನೇತೃತ್ವದಲ್ಲಿ ವಾರಸುದಾರರಿಗೆ ಹಿಂದಿರುಗಿಸಲಾಯಿತು.
ಒಟ್ಟು 500000/- ಮೌಲ್ಯದ ಒಟ್ಟು 40 ಮೊಬೈಲ್ ಪೋನ್‌ಗಳನ್ನು ಪತ್ತೆ ಮಾಡಿದ್ದು, ಮೊಬೈಲ್ ಪತ್ತೆ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ನಿಖಿಲ್ ಬಿ ಅವರು ಶ್ಲಾಘಿಸಿ ಎಲ್ಲ ಸಿಬ್ಬಂದಿಗಳಿಗೆ ಶುಭ ಕೋರಿದರು.
Kshetra Samachara
06/10/2022 07:19 pm