", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/38037520250105044754filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "NeelakantaswamyRaichur" }, "editor": { "@type": "Person", "name": "9019821579" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ರಾಯಚೂರು : ಯರಗೇರಾ ಉರುಸ್ ಮುಗಿಸಿ ಮನೆಗ ಬರುತ್ತಿದ್ದ ದಂಪತಿಗಳನ್ನು ತಡೆದ ಪೊಲೀಸ್ ವೇಶ ಧರಿಸಿದ ದರೋಡೆಕೋರರು ಚಿನ್ನ ಕದ್ದು ಕಲ್ಲು ಕೊಟ್ಟು ಪ...Read more" } ", "keywords": "Node,Raichur,Crime", "url": "https://publicnext.com/article/nid/Raichur/Crime" }
ರಾಯಚೂರು : ಯರಗೇರಾ ಉರುಸ್ ಮುಗಿಸಿ ಮನೆಗ ಬರುತ್ತಿದ್ದ ದಂಪತಿಗಳನ್ನು ತಡೆದ ಪೊಲೀಸ್ ವೇಶ ಧರಿಸಿದ ದರೋಡೆಕೋರರು ಚಿನ್ನ ಕದ್ದು ಕಲ್ಲು ಕೊಟ್ಟು ಪರಾರಿಯಾದ ಘಟನೆ ನಲ್ಲಗುಂಡಾ ಕ್ರಾಸ್ ಬಳಿ ನಡೆದಿದೆ.
ಹೌದು ರಾಯಚೂರು ನಗರದ ನಲ್ಲಗುಂಡಾ ಕ್ರಾಸ್ ಬಳಿ ಘಟನೆ ನಡೆದಿದ್ದು, ನಗರದ ಮಡ್ಡಿ ಪೇಟೆ ನಿವಾಸಿಗಳಾದ ವೈ.ಮಲ್ಲೇಶ ಹಾಗೂ ಸರೋಜಮ್ಮ ಯರಗೇರಾ ಬಡೇಸಾಬ್ ಉರುಸು ಹೋಗಿ ವಾಪಸಾಗುತ್ತಿದ್ದ ವೇಳೆ, ನಲ್ಲಗುಂಡಾ ಕ್ರಾಸ್ ಬಳಿ ಬೆಳಿಗ್ಗೆ 9.30ರ ಸುಮಾರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಪೊಲೀಸ್ ವೇಷದಲ್ಲಿ ಬೈಕ್ ಮೇಲೆ ಬಂದು ಅವರನ್ನು ನಿಲ್ಲಿಸಿದ್ದಾರೆ, ನಂತರ ರಾತ್ರಿ ಈ ಪ್ರದೇಶದಲ್ಲಿ ಕಳ್ಳತನವಾಗಿದೆ. ಮೈಮೇಲೆ ಈ ರೀತಿಯಾಗಿ ಒಡವೆಗಳನ್ನು ಹಾಕಿಕೊಳ್ಳಬೇಡಿ. ಎಂದು ಜಾಗೃತಿ ಮೂಡಸುವಂತೆ ನಟಿಸಿದ್ದಾರೆ.
ಈ ವೇಳೆ ಕೆರಳಲ್ಲಿದ್ದ 4 ತೊಲೆ ಚಿನ್ನದ ತಾಳಿ ಸರವನ್ನು ತೆಗೆಸಿ ಕಾಗದದಲ್ಲಿ ಕಟ್ಟಿಕೊಡುತ್ತೇವೆ ಎಂದು ಯಾಮಾರಿಸಿ ಕಾಗದದಲ್ಲಿ ಸಣ್ಣ ಸಣ್ಣ ಕಲ್ಲಿನ ಹರಳುಗಳನ್ನು ಇಟ್ಟು, ಪರಾರಿಯಾಗಿದ್ದಾರೆ. ಸ್ವಲ್ಪ ಮುಂದೆ ಹೊಗಿ ಅನುಮಾನಗೊಂಡು ನೋಡಿದಾಗ ಕಲ್ಲಿನ ಹರಳು ಇರುವುದು ಗೊತ್ತಾಗಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಪೊಲೀಸರಿಂದ ಯಾವುದೇ ಸ್ಪಂಧನೆ ಸಿಕ್ಕಿಲ್ಲ ಎಂದು ಸರ ಕಳೆದುಕೊಂಡ ಆರೋಪಿಸಿದ್ದಾರೆ. ಇದೀಗ ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಲು ಮುಂದಾಗಿದ್ದಾರೆ. ಈ ಒಂದು ಘಟನೆಯಿಂದ ಜನರಲ್ಲಿ ಆತಂಕವನ್ನು ಉಂಟುಮಾಡಿದೆ.
Kshetra Samachara
05/01/2025 04:47 pm