ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು : ಸಿರವಾರ ಮೈಲ್ 90ರ ನಂತರ ಕಾಲುವೆಗೆ ನೀರು ಹರಿಸಲು ಒತ್ತಾಯ

ರಾಯಚೂರು : ಜಿಲ್ಲೆಯ ಸಿರವಾರ ವಿಭಾಗ ವ್ಯಾಪ್ತಿ ಯಲ್ಲಿ ಬರುವ ಮೈಲ್ ನಂ 90 ಹಾಗೂ ನಂತರದ ಕಾಲುವೆಗಳಿಗೆ ಪ್ರಮಾಣಬದ್ಧ ಸಮರ್ಪಕ ನೀರು ಹರಿಯುತ್ತಿಲ್ಲ, ಇದರಿಂದ ನೀರು ಬಾರದೆ ಸಮಸ್ಯೆ ಯಾಗುತ್ತಿದೆ, ಸಮರ್ಪಕವಾಗಿ ಗೇಜ್ ನಿರ್ವಹಣೆ ಮಾಡಬೇಕು ಎಂದು ಒತ್ತಾಯಿಸಿ ತುಂಗಭದ್ರಾ ಎಡದಂಡೆ ಕಾಲುವೆ ರೈತರ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸ್ಥಾನಿಕ ಅಧಿಕಾರಿಗೆ ಮನವಿ ಸಲ್ಲಿಸಿದರು.

ಅಧಿಕಾರಿಗಳು ಸಮರ್ಪಕವಾಗಿ ಗೇಜ್ ನಿರ್ವಹಣೆ ಮಾಡಬೇಕು ಆದರೆ ಅದೂ ಸಹ ಸರಿಯಾಗಿ ನಿಭಾಯಿಸದ ಪರಿಣಾಮ ಮೈಲ್ ನಂ 90ರ ನಂತರದ ಕಾಲುವೆಗಳಲ್ಲಿ ನೀರು ಬರುತ್ತಿಲ್ಲ, ಬೆಳೆಗೆ ನೀರಿನಲ್ಲದೆ ಬೆಳೆ ಒಣಗುವ ಹಂತಕ್ಕೆ ಬಂದಿವೆ. ಕಾಲುವೆ ನೀರನ್ನೇ ನಂಬಿರುವ ರೈತರು ಕೂಡಲೇ 3 ದಿನಗಳಲ್ಲಿ ಕಾಲುವೆಗೆ ನೀರು ಹರಿಸಬೇಕು, ಇಲ್ಲದಿದ್ದರೆ ಬೆಳೆ ನಾಶವಾಗುತ್ತವೆ, ಕೂಡಲೇ ಅಧಿಕಾರಿಗಳ ಸಭೆ ನಡೆಸಿ ಕಾಲುವೆಗೆ ನೀರು ಹರಿಸಿ ಸಮರ್ಪಕವಾಗಿ ಗೇಜ್ ನಿರ್ವಹಣೆ ಮಾಡಿದರೆ ಮಾತ್ರ ನೀರು ದೊರೆಯಲು ಸಾಧ್ಯವಾಗುತ್ತದೆ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಂಕರಗೌಡ ಹರವಿ, ಶರಣಯ್ಯ ಸ್ವಾಮಿ, ಶಿವಪ್ಪ ಹಳ್ಳಿ ಹೊಸೂರು, ಪ್ರಕಾಶ ರೆಡ್ಡಿ ಅಮರೇಶ ಚಾಗಭಾವಿ, ಸೇರಿದಂತೆ ಅನೇಕರು ಇದ್ದರು.

Edited By : Manjunath H D
PublicNext

PublicNext

22/09/2022 05:58 pm

Cinque Terre

34.4 K

Cinque Terre

0