ಮಾನ್ವಿ: ಕಳೆದ ಮೂರು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಮಳೆಗೆ ಶಿಥಿಲಗೊಂಡ ಮನೆಗೋಡೆ ಕುಸಿದು ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವಿಗೀಡಾದ ಹೃದಯವಿತ್ರಾವತ ಘಟನೆ ನಡೆದಿದೆ.
ಜಿಲ್ಲೆಯ ಮಾನ್ವಿ ತಾಲೂಕಿನ ಕುರಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಸತತ ಮೂರು ದಿನಗಳ ಮಳೆಗೆ ಶಿಥಿಲವಾದ ಮನೆಯ ಗೋಡೆ ಕುಸಿದು ಬಿದ್ದಿದೆ. ಪರಮೇಶ್ (45), ಜಯಮ್ಮ( 40), ಭರತ್ (4) ಮೃತ ದುರ್ದೈವಿಗಳು. ಕುಸಿದು ಬಿದ್ದ ಗೋಡೆಯ ಅವಶೇಷಗಳ ಅಡಿ ಮೂವರು ಮೃತಪಟ್ಟಿದ್ದು, ಪೊಲೀಸರ ಜೊತೆಯಾಗಿ ಗ್ರಾಮಸ್ಥರು ಶವಗಳನ್ನು ಹೊರತೆಗೆದಿದ್ದಾರೆ. ಈ ವೇಳೆ ಉಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
03/10/2022 11:15 am