ರಾಯಚೂರು : ಕುಟುಂಬದೊಂದಿಗೆ ಕೃಷ್ಣಾ ನದಿಗೆ ಸ್ನಾನಕ್ಕೆ ತೆರಳಿದ್ದವರಲ್ಲಿ ಅಣ್ಣ ತಮ್ಮ ನದಿಯಲ್ಲಿ ಕೊಚ್ಚಿ ಹೋದ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಕೊಪ್ಪುರು ಗ್ರಾಮದ ಬಳಿ ಘಟನೆ ನಡೆದಿದೆ.ಇಂದು ಕುಟುಂಬ ಸಮೇತ ಕೃಷ್ಣಾ ನದಿ ತೀರಕ್ಕೆ ಹೋಗಿದ್ದ ಅಣ್ಣ ರಜಾಕ್ ಸಾಬ್(35) ಹಾಗೂ ತಮ್ಮ ಮೌಲಾ ಸಾಬ್ (32) ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.
ಸ್ನಾನ ಮಾಡಲು ನದಿಗೆ ಇಳಿದ ವೇಳೆಯಲ್ಲಿ, ಇನ್ನೂ ಈ ಸಮಯದಲ್ಲಿ ಕೈ ಕೈ ಹಿಡಿದುಕೊಂಡು ಸ್ನಾನ ಮಾಡುತ್ತಿದ್ದ ಅಣ್ಣ-ತಮ್ಮ ನೀರಿನ ಹರಿವು ಹೆಚ್ಚಿರುವ ಹಿನ್ನಲೆ ಕೊಚ್ಚಿ ಹೋಗಿದ್ದಾರೆ. ಈ ವೇಳೆ ಕೊಚ್ಚಿ ಹೋಗುತ್ತಿದ್ದ ಸಾನಿಯಾ ಅನ್ನೋ ಕುಟುಂಬಸ್ಥರು ಕೂಡಲೇ ಆಕೆಯ ರಕ್ಷಣೆ ಮಾಡಿದ್ದಾರೆ.
ಇನ್ನೂ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ದೇವದುರ್ಗ ಪೊಲೀಸರ ಭೇಟಿ, ಪರಿಶೀಲನೆ ಮಾಡಿದ್ದಾರೆ. ಸದ್ಯ ಇಬ್ಬರಿಗಾಗಿ ಶೋಧಕಾರ್ಯ ಮುಂದುವರೆದಿದೆ.
Kshetra Samachara
20/09/2022 08:26 pm