ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು : ಕಾರಿಗೆ ಅಡ್ಡ ಬಂದ ಆಕಳು, ತಪ್ಪಿಸಲು ಹೋಗಿ ಮುಗುಚಿ ಬಿದ್ದ ಕಾರು; ಮಹಿಳೆ ಸಾವು

ರಾಯಚೂರು : ಆಕಳು ತಪ್ಪಿಸಲು ಹೋಗಿ ನಗರದ ಹೈದ್ರಾಬಾದ್ ರಸ್ತೆಯ ಬೈಪಾಸ್ ಬಳಿ ಕಾರುವೊಂದು ಪಲ್ಟಿಯಾಗಿ ಕಾರಟಗಿ ಮೂಲದ ಚನ್ನಳ್ಳಿ ಕ್ಯಾಂಪಿನ ಮಹಿಳೆ ಮೃತಪಟ್ಟು ಇಬ್ಬರಿಗೆ ಗಾಯಗಳಾದ ಘಟನೆ ನಡೆದಿದೆ.

ಹೈದ್ರಾಬಾದ್‌ನಿಂದ ಕಾರಟಗಿಯ ಚನ್ನಳ್ಳಿ ಕ್ಯಾಂಪಿಗೆ ಹೊರಟಿದ್ದ ಕಾರಿಗೆ ಬೈಪಾಸ್ ಬಳಿ ಆಕಳು ಅಡ್ಡ ಬಂದ ಕಾರಣಕ್ಕೆ ಚಾಲಕ ಬ್ರೇಕ್ ಹಾಕಿದಾಗ ಕಾರು ಪಲ್ಟಿಯಾಗಿ ರಸ್ತೆ ಪಕ್ಕಕ್ಕೆ ಮುಗುಚಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಶೈಲಜಾ ಮಲ್ಲಿಕಾರ್ಜುನ (38) ಮೃತಪಟ್ಟಿದ್ದು, ಲಕ್ಷ್ಮೀ (13)ಗಂಭೀರ ಗಾಯಗಳಾಗಿವೆ.

ಇನ್ನೂ ಹೆದ್ದಾರಿಯಲ್ಲಿ ಆಕಳು ಅಡ್ಡ ಬಂದಿರುವುದೇ ದುರ್ಘಟನೆಗೆ ಕಾರಣವಾಗಿದೆ. ಕಾರು ಪಲ್ಟಿಯಾದ ವೇಗಕ್ಕೆ ಕಾರಿನ ಮೇಲ್ಭಾಗ ಜಖಂಗೊಂಡು ಅದರಲ್ಲಿದ್ದ ಮಹಿಳೆ ಶೈಲಜಾ ತೀವ್ರ ಗಾಯಗಳಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Edited By : Abhishek Kamoji
Kshetra Samachara

Kshetra Samachara

19/09/2022 04:50 pm

Cinque Terre

2.68 K

Cinque Terre

0