ಯಾದಗಿರಿ ಜಿಲ್ಲೆಯ ಶಹಾಪುರ ಠಾಣಾ ವ್ಯಾಪ್ತಿಯ ವಡಗೇರಾ ತಾಲ್ಲೂಕಿನ ಮದರಕಲ್ ಗ್ರಾಮದ ಹಿರೇಹಳ್ಳದಲ್ಲಿ ಸಿಮೆಂಟ್ ಲಾರಿ ಇಂದು ಉರುಳಿ ಬಿದ್ದಿದೆ. ತಡ ರಾತ್ರಿ ಸುರಿದ ಭಾರೀ ಮಳೆಗೆ ಹಿರೇಹಳ್ಳದಲ್ಲಿ ನೀರು ಹರಿಯುತ್ತಿದ್ದು, ನೀರಿನ ಹರಿವು ಜಾಸ್ತಿ ಇದ್ದರೂ ಚಾಲಕ ಲಾರಿ ಚಲಾಯಿಸಿದ್ದರಿಂದ ಈ ಅನಾಹುತ ಸಂಭವಿಸಿದೆ.
ಇನ್ನು ಲಾರಿಯಲ್ಲಿದ್ದವರು ಟಾಪ್ ಮೇಲೆ ಕುಳಿತು ಪ್ರಾಣ ರಕ್ಷಿಸಿಕೊಂಡಿದ್ದು, ನಂತರ ಸಂಬಂಧಿಸಿದವರಿಗೆ ಕರೆ ಮಾಡಿದ್ದಾರೆ. ಲಾರಿಯಲ್ಲಿ 3 ಟನ್ ಸಿಮೆಂಟ್ ಇತ್ತು ಎನ್ನಲಾಗಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನಿಂದ ಬೆಳಗಾವಿಗೆ ಸಿಮೆಂಟ್ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಚಾಲಕನನ್ನು ರಕ್ಷಿಸಿದ್ದಾರೆ.
ಇನ್ನು ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ.
-ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
27/08/2022 04:02 pm