ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲು ಗದಗ ಜಿಲ್ಲೆಗೆ ಇಂದು ಆಹಾರ ಮತ್ತು ಅರಣ್ಯ ಇಲಾಖೆ ಸಚಿವ ಉಮೇಶ್ ಕತ್ತಿ ಬಂದಿದ್ರು.. ಸಚಿವರ ಬಂದೋಬಸ್ತ್‌ಗೆ ಬಂದಿದ್ದ ಪೊಲೀಸರಿಬ್ಬರು ಆಯತಪ್ಪಿ ಬಿದ್ದಿರೋ ವಿಡಿಯೋ ಈಗ ವೈರಲ್ ಆಗಿದೆ..
ಗದಗ ಬಿಂಕದಕಟ್ಟಿಯ ಅರಣ್ಯ ಇಲಾಖೆ ಐಬಿಯಲ್ಲಿ ವಾಸ್ತವ್ಯ ಹೂಡಿದ್ದ ಸಚಿವರು ಬೆಳಗ್ಗೆ ಬಿಂಕದಕಟ್ಟಿಯಲ್ಲಿನ ಸಾಲು ಮರದ ತಿಮ್ಮಕ್ಕ ಸಸ್ಯ ಉದ್ಯಾನ ಉದ್ಘಾಟನೆ ಮಾಡಿದ್ರು.. ನಂತ್ರ ಕಪ್ಪದ ಗುಡ್ಡಕ್ಕೆ ತೆರಳಿ, ಕಪ್ಪತ ಮಲ್ಲಯ್ಯನ ದರ್ಶನಕ್ಕೆ ಪಡೆದಿದ್ದಾರೆ. ಈ ವೇಳೆ ಸಚಿವರನ್ನ ಹಿಂಬಾಲಿಸಿ ಕೆಲ ಅಧಿಕಾರಿಗಳು ಹೋದಾಗ ಹಿಂದೆ ಉಳಿದಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಬೈಕ್ ಮೇಲಿಂದ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ನಂತರ ಸಾವರಿಸಿಕೊಂಡು ಮತ್ತೆ ಬೈಕ್ ಮೇಲೆ ಮುಂದೆನಡೆದರು. ಈ ವಿಡಿಯೋ ಸದ್ಯ ವೈರಲ್ ಆಗ್ತಿದೆ.
PublicNext
26/08/2022 08:19 pm