ಮಳೆಯಿಂದಾಗಿ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಶೆಟ್ಟಿಕೆರೆ, ತುಂಬಿರುವ ಪರಿಣಾಮ ಗ್ರಾಮದ ರೈತರು ಬೆಳೆದ ಗೋವಿನಜೋಳ, ಹೆಸರು ಹಾಗೂ ಹತ್ತಿ, ಫಸಲಿಗೆ ನೀರು ತುಂಬಿ ಬೆಳೆ ಹಾನಿಯಾಗಿದೆ.
ಲಕ್ಷ್ಮೇಶ್ವರ ತಾಲೂಕಿನ ಶೆಟ್ಟಿಕೆರೆ ನೀರು ತುಂಬಿ ಕೆರೆಯ ಅಕ್ಕಪಕ್ಕದ ಜಮೀನುಗಳಲ್ಲಿ ತುಂಬಿಕೊಂಡಿದೆ, ಶೆಟ್ಟಿಕೆರೆ ಭಾಗದ ರೈತರು ಸುಮಾರು 240 ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ, ಹತ್ತಿ ಬಿತ್ತನೆ ಮಾಡಿದ್ದರು, ಅದರಲ್ಲಿ ಸುಮಾರು 240 ಎಕರೆ ಪ್ರದೇಶ ಸಂಪೂರ್ಣವಾಗಿ ಜಲಾವೃತವಾಗಿದೆ ಎನ್ನುತ್ತಾರೆ ರೈತರು, ಕೆರೆ ತುಂಬಾ ಹೂಳು ತುಂಬಿರುವುದರಿಂದ ಕೆರೆಯಲ್ಲಿ ನೀರು ಶೇಖರಣೆಯಾಗದೆ. ಬಂದ ನೀರು ಸರಾಗವಾಗಿ ರೈತರ ಜಮೀನುಗಳಿಗೆ ಸೇರುತ್ತಿದೆ. ರೈತರ ಜಮೀನುಗಳು ತಗ್ಗು ಪ್ರದೇಶದಲ್ಲಿ ಇದ್ದು ಸರಾಗವಾಗಿ ಜಮೀನುಗಳಿಗೆ ನೀರು ನುಗ್ಗಿದೆ. ಕೆರೆಯಲ್ಲಿ ಹೋಳು ತುಂಬಿರುವುದರಿಂದ ರೈತರ ಜಮೀನುಗಳಲ್ಲಿ ನೀರು ಸರಾಗವಾಗಿ ಹರಿದು ರೈತರ ಜಮೀನುಗಳಿಗೆ ತಲುಪುತ್ತಿದೆ ಎನ್ನುತ್ತಾರೆ ಸ್ಥಳೀಯರು.
ಈ ಬಾರಿ ಒಂದು ತಿಂಗಳಿಂದ ಉತ್ತಮ ಮಳೆಯಾಗಿದ್ದು ಫಸಲು ಕೈ ಸೇರಲಿದೆ ಎಂಬ ನಿರೀಕ್ಷೆಯಲ್ಲಿದ್ದ ರೈತರು, ಶೆಟ್ಟಿಕೆರೆ ತುಂಬಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಬೆಳೆ ಜಲಾವೃತವಾಗಿದೆ. ಕೆರೆ ನೀರು ಕೋಡಿ ಬಿದ್ದು ಜಮೀನುಗಳಿಗೆ ಸೇರಿದ ಪರಿಣಾಮ ಸಾಲ ಮಾಡಿ ಒಂದು ಎಕರೆಗೆ 10-12 ಸಾವಿರ ರೂ, ಖರ್ಚು ಮಾಡಿ ಬೆಳೆದ ಮೆಕ್ಕಜೋಳ, ಹೆಸರು, ಹತ್ತಿ, ಜಮೀನಿನಲ್ಲಿ ನೀರು ತುಂಬಿಕೊಂಡಿದೆ. ಇದರಿಂದ ಕೈಗೆ ಬಂದ ಫಸಲು ನೀರಿನಿಂದಾಗಿ ಹಾನಿ ಉಂಟಾಗಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.
PublicNext
29/08/2022 07:43 pm