ವಿಜಯನಗರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೊಸಪೇಟೆ ತಾಲ್ಲೂಕಿನ ಕಮಲಾಪುರದ ಡಾ.ಬಿ.ಆರ್.ಅಂಬೇಡ್ಕರ್ ಕಾಲೊನಿಯ ಪರಿಶಿಷ್ಟ ಜಾತಿಯ ಹಿರಾಳ್ ಕೊಲ್ಲಾರಪ್ಪ ಅವರ ಮನೆಯಲ್ಲಿ ಉಪಾಹಾರ ಸೇವಿಸಿದರು. ಈ ವೇಳೆ ಬಿ.ಎಸ್ ಯಡಿಯೂರಪ್ಪ ಕೂಡಾ ಜೊತೆಯಾಗಿದ್ದರು.
ಹೌದು ಹೊಸಪೇಟೆ ಮತ್ತು ಕೊಪ್ಪಳದಲ್ಲಿ ಇಂದು ಬಿಜೆಪಿ ಜನಸಂಕಲ್ಪ ಯಾತ್ರೆ ನಡೆಯಲಿದೆ. ಕಮಲಾಪುರದ ದಲಿತ ಮಹಿಳೆ ಯಲ್ಲಮ್ಮ ಕೊಲ್ಲೂರಪ್ಪ ಮನೆಯಲ್ಲಿ ಸಿಎಂ ಹಾಗೂ ಯಡಿಯೂರಪ್ಪನವರಿಗಾಗಿ ಉಪ್ಪಿಟ್ಟು, ಒಗ್ಗರಣಿ ಮಿರ್ಜಿ, ಕೇಸರಿ ಬಾತನ್ನ ಸವಿದಿದ್ದಾರೆ. ಸಿಎಂ ಬೊಮ್ಮಾಯಿ ಜೊತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರಾದ ಆನಂದ್ ಸಿಂಗ್, ಗೋವಿಂದ ಕಾರಜೋಳ ಕೂಡ ಸಾಥ್ ನೀಡಿದ್ದರು.
PublicNext
12/10/2022 12:02 pm