ವಿಶ್ಲೇಷಣೆ-- ಪ್ರವೀಣ್ ನಾರಾಯಣ ರಾವ್
ಬೆಂಗಳೂರು: 2023 ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಸನ್ನದ್ದವಾಗಿದ್ದು ಮಹಾತ್ವಾಕಾಂಕ್ಷೆಯ ಜನಸಂಕಲ್ಪ ಯಾತ್ರೆಗೆ ಮೊದಲ ಅಡಿ ಇಟ್ಟಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಜಂಟಿಯಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಂಚರಿಸಲಿರುವ ಯಾತ್ರೆಗೆ ರಾಯಚೂರಿನಲ್ಲಿ ಅದ್ದೂರಿ ಚಾಲನೆ ದೊರಕಿದೆ..
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮಂತ್ರಾಲಯಕ್ಕೆ ತೆರಳಿ ಗುರುರಾಘವೇಂದ್ರ ಸ್ವಾಮಗಳ ಬೃಂದಾವನದ ದರುಶನವನ್ನೂ ಪಡೆದಿದ್ದಾರೆ...ಕಲ್ಯಾಣ ಕರ್ನಾಟಕದ ಜನರಿಗೆ ಭರ್ಜರಿ ಆಫರ್ ಗಳನ್ನೂ ಕೊಟ್ಟಿದ್ದಾರೆ...ರಾಯಚೂರಿನಿಂದ ಆರಂಭಗೊಂಡ ಈ ಯಾತ್ರೆ ಡಿ.25ಕ್ಕೆ ರಾಮನಗರ ಜಿಲ್ಲೆಯಲ್ಲಿ ಅಂತ್ಯವಾಗಲಿದೆ.
ಮುಂದಿನ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡೇ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ನಡೆಸಿದೆ. ರಾಜ್ಯದಲ್ಲಿಯೂ ರಾಹುಲ್ ಗಾಂಧಿ ಯಾತ್ರೆ ಭರ್ಜರಿಯಾಗಿ ಸಾಗಿದ್ದು, ಅಭೂತಪೂರ್ವ ಜನಬೆಂಬಲವೂ ವ್ಯಕ್ತವಾಗುತ್ತಿದೆ. ಅದಕ್ಕೆ ಸ್ಪರ್ಧೆಯೊಡ್ಡಲು ಹಾಗೂ ಚುನಾವಣೆಯಲ್ಲಿ ಬಹುಮತ ಪಡೆದು ಮತ್ತೊಮ್ಮೆ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ರಾಜ್ಯ ಪ್ರವಾಸ ಹಮ್ಮಿಕೊಂಡಿದೆ. ಈ ಯಾತ್ರೆ- ಜಾತ್ರೆ ಯ ಕುರಿತಾದ ವಿಶ್ಲೇಷಣೆ ಇಲ್ಲಿದೆ.
PublicNext
11/10/2022 07:52 pm