ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉದ್ದವ್ ಠಾಕ್ರೆ ಬಣಕ್ಕೆ ‘ತ್ರಿಶೂಲ’ ಬದಲಿಗೆ ಸಿಕ್ಕಿದ್ದು ‘ಪಂಜು’!

ಮುಂಬೈ: ಶಿವಸೇನಾದ ಎರಡೂ ಬಣಗಳ ಹೆಸರಿಗೆ ಸಂಬಂಧಪಟ್ಟಂತೆ ಚುನಾವಣಾ ಆಯೋಗ ಮಹತ್ವದ ಆದೇಶ ನೀಡಿದೆ.ಸಿಎಂ ಏಕನಾಥ್ ಶಿಂಧೆ ಬಣಕ್ಕೆ ‘‘ಬಾಳಾಸಾಹೇಬಾಚಿ ಶಿವಸೇನಾ’, ಠಾಕ್ರೆ ಬಣಕ್ಕೆ ‘ಶಿವಸೇನಾ ಉದ್ಧವ್ ಬಾಳಾಸಾಹೇಬ್ ಠಾಕ್ರೆ’ ಎಂದು ಹೆಸರು ನೀಡಿದೆ.‘ಪಂಜು/ಉರಿಯುತ್ತಿರುವ ಜ್ಯೋತಿ’ ಹೊಸ ಚಿಹ್ನೆಯಾಗಿ ಬಳಸಲು ಹೇಳಿದೆ. ಆದರೆ, ಶಿಂಧೆ ಬಣಕ್ಕೆ ಇನ್ನೂ ಯಾವುದೇ ಚಿಹ್ನೆ ನೀಡಿಲ್ಲ.

ತ್ರಿಶೂಲ,ಗದೆ ಧಾರ್ಮಿಕ ಚಿಹ್ನೆಯಾಗಿದ್ದರಿಂದ ಇದನ್ನು ಬಳಸಲು ಆಯೋಗ ನಿರಾಕರಿಸಿದೆ.

ಇದಕ್ಕೂ ಮೊದಲು ತ್ರಿಶೂಲವನ್ನು ಚಿಹ್ನೆಯಾಗಿ ಕೊಡುವಂತೆ ಮಾಡಿದ್ದ ಮನವಿಯನ್ನು ಆಯೋಗ ತಿರಸ್ಕರಿಸಿದೆ. ಉಭಯ ಬಣಗಳು ಈ ಹೆಸರುಗಳ ಅಡಿಯಲ್ಲೇ ಮುಂಬರುವ ಉಪಚುನಾವಣೆಯನ್ನು ಎದುರಿಸಬೇಕಾಗುತ್ತದೆ.

Edited By : Nirmala Aralikatti
PublicNext

PublicNext

11/10/2022 03:12 pm

Cinque Terre

18.93 K

Cinque Terre

1